ಬೆಳಗಾವಿ ನಗರದ ವಡಗಾವಿಯ ಬಾಲಕೃಷ್ಣ ನಗರದ ರಸ್ತೆಯಲ್ಲಿ ವೇಗವಾಗಿ ಬಂದ ಟ್ರ್ಯಾಕ್ಟರ್ ಹಾಕಲಾಗಿದ್ದ ಮದುವೆ ಮಂಟಪದೊಳಗೆ ನುಗ್ಗಿದ್ದು, ಏಳು ವರ್ಷದ ಬಾಲಕ ಕಣಬರ್ಗಿಯ ಆರುಷ್ ಮಹೇಶ ಮೋದೇಕರ ಮೃತಪಟ್ಟ ಘಟನೆ ನಡೆದಿದೆ.
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಆರುಷ್, ಮಂಟಪದೊಳಗೆ ಆಟವಾಡುತ್ತಿದ್ದ. ಮಣ್ಣು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಮಂಟಪದೊಳಗೆ ನುಗ್ಗಿ ಡಿಕ್ಕಿ ಹೊಡೆದಿದ್ದರಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ಮುನ್ನ ಮೃತಪಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.