ಬೆಳಗಾವಿ ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಖಡೇಬಜಾರ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದು, ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿಯ ಹಳೇ ಗಾಂಧಿನಗರದ ನಿವಾಸಿ, ಮೂಲತಃ ಬಡಾಲ ಅಂಕಲಗಿಯ ರಮೇಶ ಚಂದ್ರಕಾಂತ ಅರಳಿಕಟ್ಟಿ(33) ಬಂಧಿತ ಆರೋಪಿ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ನಾನು ಪ್ರಾಮಾಣಿಕ, ಪಕ್ಷ ಬಿಡುವ ಮಾತೇ ಇಲ್ಲ: ಮಾಜಿ ಸಚಿವ ಶ್ರೀರಾಮುಲು
ಬಂಧಿತನಿಂದ ₹1.45 ಲಕ್ಷ ಮೌಲ್ಯದ ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ. ಖಡೇಬಜಾರ್ ಮತ್ತು ಶಹಾಪುರ ಠಾಣೆ ವ್ಯಾಪ್ತಿಯ ಎರಡು ಬೈಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.