ಗರ್ಭಿಣಿಯ ಗರ್ಭದಲ್ಲಿದ್ದ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿರುವ ಅಪರೂಪದ ಮತ್ತು ವಿಚಿತ್ರ ಘಟನೆ ಮಹಾರಾಷ್ಟ್ರದ ಬುಲ್ದಾನಾದಲ್ಲಿ ಬೆಳಕಿಗೆ ಬಂದಿದೆ.
32 ವರ್ಷದ ಮಹಿಳೆ ಗರ್ಭಿಣಿಯಾಗಿ 35 ವಾರಗಳು ಕಳೆದಿವೆ. ಅವರು ನಿಯಮಿತಿ ತಪಾಸಣೆಗಾಗಿ ಬುಲ್ದಾನಾ ಜಿಲ್ಲಾ ಮಹಿಳಾ ಆಸ್ಪತ್ರೆಗೆ ತೆರಳಿದ್ದರು. ಮಗುವಿನ ಬೆಳವಣಿಗೆಯನ್ನು ಪರೀಕ್ಷಿಸಲು ‘ಸ್ಯಾನಿಂಗ್’ ಮಾಡಲಾಗಿದ್ದು, ಈ ವೇಳೆ, ಮಗುವಿನ ಹೊಟ್ಟೆಯಲ್ಲಿಯೂ ಭ್ರೂಣ ಇರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಪ್ರಸಾದ್ ಅಗರ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, “ಭ್ರೂಣದಲ್ಲಿಯೂ ಭ್ರೂಣ ಪತ್ತೆಯಾಗುವುದು ಅಪರೂಪದ ಘಟನೆಯಾಗಿದೆ. ಐದು ಲಕ್ಷ ಮಂದಿಯಲ್ಲಿ ಒಬ್ಬರಲ್ಲಿ ಮಾತ್ರ ಇಂತಹ ಪ್ರಕರಣಗಳು ಕಂಡುಬರುತ್ತವೆ” ಎಂದು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಟ್ರಂಪ್ ಟೀಮ್‌ನಿಂದ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಔಟ್ ಆಗಿದ್ದೇಕೆ?
“ಭಾರತದಲ್ಲಿನ 10-15 ಪ್ರಕರಣಗಳು ಸೇರಿದಂತೆ ವಿಶ್ವಾದ್ಯಂತ ಇಂತಹ 200 ಪ್ರಕರಣಗಳು ಈವರೆಗೆ ವರದಿಯಾಗಿವೆ. “ನಾವು ಜಾಗರೂಕನಾಗಿದ್ದರಿಂದ ಮಗುವಿನ ಹೊಟ್ಟೆಯಲ್ಲಿಯೂ ಭ್ರೂಣ ಇರುವ ಅಸಾಮಾನ್ಯ ಸಂಗತಿಯನ್ನು ಗಮನಿಸಿದೆವು” ಎಂದು ಅವರು ವಿವರಿಸಿದ್ದಾರೆ.
“ಎರಡನೇ ಅಭಿಪ್ರಾಯಕ್ಕಾಗಿ ಪ್ರಕರಣವನ್ನು ರೇಡಿಯಾಲಜಿಸ್ಟ್ ಡಾ. ಶ್ರುತಿ ಥೋರಟ್ ಅವರಲ್ಲಿಗೆ ಕಳಿಸಿದ್ದೆವು. ಅವರು ಸುರಕ್ಷಿತ ಹೆರಿಗೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಗರ್ಭಿಣಿಯನ್ನು ನೆರೆಯ ಛತ್ರಪತಿ ಸಂಭಾಜಿನಗರದಲ್ಲಿರುವ ವೈದ್ಯಕೀಯ ಸೌಲಭ್ಯಕ್ಕೆ ಕಳಿಸುವಂತೆ ಸೂಚಿಸಿದ್ದಾರೆ” ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.