“ಇಬ್ಬರು ಹಿಂದೂಗಳ ನಡುವೆ ನಡೆಯುವ ವಿವಾಹವು ಪವಿತ್ರವಾದುದ್ದು, ಹಿಂದೂ ವಿವಾಹ ಕಾಯ್ದೆಯ ಪ್ರಕಾರವಾಗಿ ವಿವಾಹ ಸಂಬಂಧದಲ್ಲಿ ತೀವ್ರ ತೊಂದರೆ ಇಲ್ಲದ ಹೊರಗಾಗಿ ಒಂದು ವರ್ಷದಲ್ಲೇ ವಿವಾಹ ಸಂಬಂಧವನ್ನು ಮುರಿಯಲಾಗದು” ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಮತ್ತು ದೊನಾಡಿ ರಮೇಶ್ ನೇತೃತ್ವದ ದ್ವಿಸದಸ್ಯ ಪೀಠವು ವಿಚಾರಣೆಯೊಂದರ ವೇಳೆ ಈ ಹೇಳಿಕೆ ನೀಡಿದೆ. ಸೆಕ್ಷನ್ 14ರ ಅಡಿಯಲ್ಲಿ ವಿಚ್ಛೇದನೆಗೆ ಒಂದು ವರ್ಷ ಅವಧಿ ಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಇದನ್ನು ಓದಿದ್ದೀರಾ? ಅಲಹಾಬಾದ್ ಹೈಕೋರ್ಟ್‌ನ ಕಾರ್ಯನಿರ್ವಹಣೆ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ
ನಿಶಾಂತ್ ಭಾರದ್ವಾಜ್ ಮತ್ತು ರಿಷಿಕಾ ಗೌತಮ್ ಎಂಬ ದಂಪತಿಯು ಪರಸ್ಪರ ಒಪ್ಪಂದದ ಮೇರೆಗೆ ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13-ಬಿ ಅಡಿಯಲ್ಲಿ ವಿಚ್ಛೇದನೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸಹಾರನ್‌ಪುರದ ಕೌಟುಂಬಿಕ ನ್ಯಾಯಾಲಯವು ಸೆಕ್ಷನ್ 14ರ ಅಡಿಯಲ್ಲಿ ವಿಚ್ಛೇದನೆ ಪಡೆಯಲು ಅರ್ಹತೆಯಿಲ್ಲ. ವಿವಾಹವಾಗಿ ಒಂದು ವರ್ಷವಾದರೂ ಆಗಬೇಕು ಎಂದು ಹೇಳಿ ಅರ್ಜಿ ತಿರಸ್ಕರಿಸಿತ್ತು.
ಅದಾದ ಬಳಿಕ ನಿಶಾಂತ್ ಭಾರದ್ವಾಜ್ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಕೂಡಾ ಅರ್ಜಿಯನ್ನು ತಿರಸ್ಕರಿಸಿದೆ. ಒಂದು ವರ್ಷವಾದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ತಿಳಿಸಿದೆ.
ಅರ್ಜಿಯು ಇಬ್ಬರು ಜೊತೆಯಾಗಿ ಜೀವಿಸಲು ಯಾವುದೇ ಕಷ್ಟವಿದೆ ಎಂಬುದನ್ನು ಉಲ್ಲೇಖಿಸಿಲ್ಲ. ಹಾಗಿರುವಾಗ ಒಂದು ವರ್ಷ ಸಮಯ ತೆಗೆದುಕೊಳ್ಳಿ. ಇಬ್ಬರು ಹಿಂದೂಗಳ ನಡುವೆ ನಡೆಯುವ ವಿವಾಹವು ಪವಿತ್ರವಾದುದ್ದು ಎಂದು ಹೈಕೋರ್ಟ್ ಹೇಳಿಕೊಂಡಿದೆ.
ಕಾನೂನು ಅಡಿಯಲ್ಲಿ ವಿಚ್ಛೇದನಕ್ಕೆ ಒಂದು ವರ್ಷ ಅವಧಿ ಬೇಕಾಗುತ್ತದೆ ಎಂಬುದು ಒಪ್ಪಬಹುದಾದರೂ ‘ಇಬ್ಬರು ಹಿಂದೂಗಳ ನಡುವಿನ ವಿವಾಹ ಪವಿತ್ರವಾದುದ್ದು’ ಎಂಬ ಹೈಕೋರ್ಟ್ ಹೇಳಿಕೆಯು ಚರ್ಚೆಗೆ ಗ್ರಾಸವಾಗಬೇಕಾಗಿರುವುದು. ಅಂತರ್‌ಧರ್ಮೀಯ ವಿವಾಹವನ್ನು ಕೀಳಾಗಿ ನ್ಯಾಯಮೂರ್ತಿಗಳು ಕಾಣುವುದೇ?
