ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟ ಗಾಯಕ್ಕೆ ಚಿಕಿತ್ಸೆ; ಪರಿಹಾರ ಪಡೆಯದ ಸಂತ್ರಸ್ತರು

Date:

Advertisements
  • ಭಯ, ಸಾಮಾಜಿಕ ಒತ್ತಡದಿಂದ ಸಂತ್ರಸ್ತರು ಪೊಲೀಸ್ ಪ್ರಕರಣ ದಾಖಲಿಸಿಲ್ಲ
  • ಸರ್ಕಾರದ ಯೋಜನೆಯಡಿ ₹2 ರಿಂದ ₹8 ಲಕ್ಷ ಪರಿಹಾರವನ್ನು ಪಡೆಯಬಹುದು

ರಾಜಧಾನಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ವರ್ಷಕ್ಕೆ ನೂರಾರು ಮಂದಿ ಸುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯಲು ದಾಖಲಾಗುತ್ತಾರೆ. ದಾಖಲಾಗುವ ಸಂತ್ರಸ್ತರಿಗೆ ಸರ್ಕಾರದಿಂದ ಸಂತ್ರಸ್ತ ಪರಿಹಾರ ಯೋಜನೆಯಡಿ ಪರಿಹಾರವನ್ನು ನೀಡಲಾಗುತ್ತದೆ ಆದರೆ, ಇಲ್ಲಿಯವರೆಗೂ ಯಾರೂ ಈ ಯೋಜನೆಯ ಲಾಭವನ್ನು ಪಡೆದಿಲ್ಲ.

ಭಯ ಅಥವಾ ಸಾಮಾಜಿಕ ಒತ್ತಡದಿಂದ ಸಂತ್ರಸ್ತರು ಪೊಲೀಸ್ ಪ್ರಕರಣಗಳನ್ನು ದಾಖಲಿಸದೇ ಸರ್ಕಾರದ ಯೋಜನೆಯಡಿ ಪರಿಹಾರ ಪಡೆಯುತ್ತಿಲ್ಲ.

ಪತಿಯ ಕಿರುಕುಳ, ಅತ್ತೆ ಕಾಟ, ವರದಕ್ಷಿಣೆ ಕಿರುಕುಳ ಸೇರಿದಂತೆ ನಾನಾ ಸಮಸ್ಯೆಗಳಿಂದ ಮಹಿಳೆಯರು ಗಂಡನಿಂದ ಬೆಂಕಿ ಹಚ್ಚುವಂತಹ ಹೀನ ಕೃತ್ಯಗಳಿಗೆ ಸಿಲುಕುತ್ತಾರೆ. ಬಳಿಕ ಅವರು ಗಂಡನ ಮನೆಯನ್ನು ತ್ಯಜಿಸಿ ಹೋಗುತ್ತಾರೆ. ಆರ್ಥಿಕ ಬೆಂಬಲವಿಲ್ಲದೇ ಒಂಟಿಯಾಗಿ ಜೀವನ ನಡೆಸುತ್ತಾರೆ. ಸಂತ್ರಸ್ತರು ಸುಟ್ಟ ಗಾಯದ ತೀವ್ರತೆಯ ಅನುಗುಣವಾಗಿ ಅವರು ಸರ್ಕಾರದ ಯೋಜನೆಯಡಿ ₹2 ರಿಂದ ₹8 ಲಕ್ಷ ಪರಿಹಾರವನ್ನು ಪಡೆಯಬಹುದು.

Advertisements

“ಜನವರಿ 2020 ಮತ್ತು ಏಪ್ರಿಲ್ 2023ರ ನಡುವೆ ವಿಕ್ಟೋರಿಯಾ ಆಸ್ಪತ್ರೆಗೆ ಕೌಟುಂಬಿಕ ಹಿಂಸೆಗೆ ಒಳಗಾದ ಸುಮಾರು 600 ಸುಟ್ಟ ರೋಗಿಗಳು ದಾಖಲಾಗಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸಂಗಾತಿಯು ಮಹಿಳೆಯರನ್ನು ಸುಟ್ಟುಹಾಕಿದ ಪ್ರಕರಣಗಳು ಅಥವಾ ನಿರಂತರ ಕಿರುಕುಳದಿಂದಾಗಿ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಗಳು ಇದರಲ್ಲಿ ಸೇರಿವೆ” ಎಂದು ಸಂತ್ರಸ್ತರ ಪರ ಆಸ್ಪತ್ರೆಯೊಂದಿಗೆ ಕೆಲಸ ಮಾಡುವ ಅವೇಕ್ಷಾ ಎಂಬ ಎನ್‌ಜಿಒನ ಸತ್ಯ ದೇವಿ ಹೇಳಿದರು.

“ಪರಿಹಾರ ಪಡೆಯಲು ಸಂತ್ರಸ್ತರು ಮೊದಲು ಎಫ್‌ಐಆರ್ ದಾಖಲಿಸಬೇಕು. ಆದರೆ, 33 ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅದರಲ್ಲಿ 28 ಪ್ರಕರಣಗಳು ಸುಟ್ಟಗಾಯಗಳು, ವರದಕ್ಷಿಣೆ ಸಂಬಂಧಿತ ಹಿಂಸೆ ಮತ್ತು ಆತ್ಮಹತ್ಯೆಗೆ ಪ್ರಚೋದನೆಯಿಂದ ಉಂಟಾದ ಸಾವುಗಳಾಗಿವೆ. ಉಳಿದ ಐವರು ಬದುಕುಳಿದವರು” ಎಂದರು.

“ಸಂತ್ರಸ್ತರು ನ್ಯಾಯಾಲಯದ ವಿಚಾರಣೆಯ ನಂತರ ಪರಿಹಾರವನ್ನು ಪಡೆಯಬಹುದು. ಮಧ್ಯಂತರ ಪರಿಹಾರಕ್ಕಾಗಿ, ಅವರು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಈವರೆಗೆ ಇಬ್ಬರು ಮಾತ್ರ ಪ್ರಾಧಿಕಾರಕ್ಕೆ ಬಂದಿದ್ದಾರೆ. ಅವರಲ್ಲಿ ಒಬ್ಬರಿಗೆ ಮಾತ್ರ, ದಾಳಿಕೋರ ಮೂರನೇ ವ್ಯಕ್ತಿಯಾಗಿದ್ದು, ಪತಿ ಅಲ್ಲ, ಅವರು 1.5 ಲಕ್ಷ ರೂಪಾಯಿಗಳ ಮಧ್ಯಂತರ ಪರಿಹಾರವನ್ನು ಪಡೆದರು” ಎಂದು ದೇವಿ ಹೇಳಿದರು.

“ಸಂತ್ರಸ್ತರು ಸಾಮಾನ್ಯವಾಗಿ ಸುಟ್ಟಗಾಯಗಳ ನಿಜವಾದ ಕಾರಣವನ್ನು ವೈದ್ಯರಿಗೆ ಅಥವಾ ಪೊಲೀಸರಿಗೆ ಬಹಿರಂಗಪಡಿಸುವುದಿಲ್ಲ. ಚಿಕಿತ್ಸೆಯು ಸಾಮಾನ್ಯವಾಗಿ ಆರರಿಂದ ಏಳು ತಿಂಗಳವರೆಗೆ ಇರುತ್ತದೆ. ಆದ್ದರಿಂದ, ಕೆಲ ಸಂತ್ರಸ್ತರು ಆಸ್ಪತ್ರೆಯಲ್ಲಿ ನೋಡಿಕೊಳ್ಳವುದು, ಖರ್ಚುಗಳಿಗಾಗಿ ಮತ್ತು ನಂತರದ ಭೇಟಿಗಳಿಗಾಗಿ ತಮ್ಮ ಗಂಡನ ಮೇಲೆ ಅವಲಂಬಿತರಾಗಿದ್ದಾರೆ. ಆದ್ದರಿಂದ, ಅವರು ಈ ಘಟನೆಗಳ ಬಗ್ಗೆ ಪ್ರಕರಣ ದಾಖಲಿಸುವುದಿಲ್ಲ. ಆಕಸ್ಮಿಕವಾಗಿ ನಡೆದಿದೆ ಎಂದು ಹೇಳುತ್ತಾರೆ” ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ? ‘ಗೃಹಜ್ಯೋತಿ’ ವಿರುದ್ಧ ಚೆಂಡು ಹೂವು ಮುಡಿದುಕೊಂಡು ವಿನೂತನ ಪ್ರತಿಭಟನೆ: ಆಪ್

“ಸಂತ್ರಸ್ತರು ಹೇಳಿಕೊಂಡಂತೆ ಸುಟ್ಟಗಾಯಗಳು ಅಡುಗೆಮನೆಯ ಅಪಘಾತಗಳಿಂದ ಸಂಭವಿಸಿರುವುದು ಅಲ್ಲ ಎಂಬುದು ಸ್ಪಷ್ಟವಾದಾಗಲೂ ಪೊಲೀಸರು ಪ್ರಕರಣಗಳನ್ನು ತನಿಖೆ ಮಾಡುವುದಿಲ್ಲ. ಸುಟ್ಟ ಗಾಯಗಳಿಂದ ಅವರ ಮುಂದುವರಿದ ಆರೋಗ್ಯ ಸಮಸ್ಯೆಗಳಿಂದ, ಅವರು ಯೋಗ್ಯವಾದ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಬಾಡಿಗೆ, ಆಹಾರ ಮತ್ತು ಮಕ್ಕಳ ಶಿಕ್ಷಣ ಎಲ್ಲವೂ ತೊಂದರೆಯಾಗುತ್ತದೆ” ಎಂದು ದೇವಿ ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, “ಪೊಲೀಸರು ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ತನಿಖೆ ಮಾಡಲು ಮತ್ತು ಎಫ್‌ಐಆರ್‌ಗಳನ್ನು ದಾಖಲಿಸಲು ಒಲವು ತೋರುತ್ತಿಲ್ಲ. ಪರಿಹಾರ ನೀಡುವ ಬಗ್ಗೆ ಅರಿವಿನ ಕೊರತೆ ಮತ್ತೊಂದು ಸಮಸ್ಯೆಯಾಗಿದೆ” ಎಂದು ತಿಳಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

Download Eedina App Android / iOS

X