ಯುವತಿಯ ಹೆಸರಿನಲ್ಲಿ ಮಾಡಿಸಲಾಗಿದ್ದ ಇನ್ಶುರೆನ್ಸ್‌ನಿಂದ ಹಣ ಪಡೆಯುವುದಕ್ಕಾಗಿ ಯುವಕನೊಬ್ಬ ಆಕೆಯನ್ನೇ ಕೊಂದಿರುವ ಆಘಾತಕಾರಿ ಘಟನೆ ಆಂದ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಮಾಲಪತಿ ಅಶೋಕ್ ಕುಮಾರ್ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಹೇಳಲಾಗಿದೆ.
ಆರೋಪಿ ಅಶೋಕ್ ರೆಡ್ಡಿಯ ತಂಗಿ ಹೆಸರಿನಲ್ಲಿ 1 ಕೋಟಿ ರೂ. ಮೌಲ್ಯದ ವಿಮೆ ಮಾಡಿಸಲಾಗಿತ್ತು. ಆ ವಿಮೆ ಹಣವನ್ನು ಪಡೆಯುವುದಕ್ಕಾಗಿ ತಂಗಿಯನ್ನೇ ಅಶೋಕ್ ರೆಡ್ಡಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಶೋಕ್ ರೆಡ್ಡಿಯ ತಂಗಿಗೆ ವಿವಾಹವಾಗಿದ್ದು, ಗಂಡನಿಂದ ದೂರು ಉಳಿದಿದ್ದರು. ವಿಚ್ಛೇದನ ಪಡೆದಿದ್ದರು. ಮಕ್ಕಳೂ ಇಲ್ಲದ ಕಾರಣ ಏಕಾಂಗಿ ಜೀವನ ನಡೆಸುತ್ತಿದ್ದರು. ಅವರ ಜೀವನ ನಿರ್ವಹಣೆಗೆ ಅಶೋಕ್ ರೆಡ್ಡಿ ಸಹಾಯ ಮಾಡಿದ್ದ ಎಂದು ಹೇಳಲಾಗಿದೆ.
ಸಾಲಬಾಧೆಗೆ ಸಿಲುಕಿದ್ದ ಅಶೋಕ್ ರೆಡ್ಡಿ, ತನ್ನ ತಂಗಿಯನ್ನು ಕೊಂದು ವಿಮೆ ಹಣವನ್ನು ಪಡೆಯಲು ಸಂಚು ರೂಪಿಸಿದ್ದನು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ನೆಪವೊಡ್ಡಿ ತನ್ನ ಕಾರಿನಲ್ಲಿ ಕೊರೆದೊಯ್ದಿದ್ದಾನೆ. ಆಸ್ಪತ್ರೆಯಲ್ಲಿ ತಪಾಸಣೆ ಮುಗಿಸಿ, ಹಿಂದಿರುಗುವಾಗ ಆಕೆಗೆ ನಿದ್ರೆ ಮಾತ್ರೆಗಳನ್ನು ಕೊಟ್ಟು, ಹತ್ಯೆಗೈದಿದ್ದಾರೆ. ಪ್ರಕರಣವನ್ನು ಅಪಘಾತವೆಂದು ಬಿಂಬಿಸಲು ಕೂಡ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲಿಗೆ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಕರಣದ ಸತ್ಯಾಸತ್ಯೆತೆಯನ್ನು ಬೇಧಿಸಿದ್ದಾರೆ. ಆಶೋಕ್ ರೆಡ್ಡಿಯೇ ಆಕೆಯನ್ನು ಕೊಲೆ ಮಾಡಿದ್ಧಾನೆ ಎಂದು ಕಂಡುಹಿಡಿದಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 120 (ಬಿ), 302, ಮತ್ತು 201 ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.