ಪಂಜಾಬ್ ರಾಜ್ಯದ ಅಮೃತಸರ ನಗರದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಬಿ ಆರ್ ಅಂಬೇಡ್ಕರ್ ಅವರ ಮೂರ್ತಿಗೆ ಹಾನಿ ಮಾಡಿ, ಸಂವಿಧಾನ ಪ್ರತಿ ಸುಟ್ಟ ದೇಶದ್ರೋಹಿಯನ್ನು ಕೂಡಲೇ ಪೊಲೀಸರು ಎನ್ಕೌಂಟರ್ ಮಾಡಬೇಕು, ಆಗ ಮಾತ್ರ ಇಂತಹವರಿಗೆ ಕಾನೂನಿನ ಪಾಠ ಆಗುತ್ತದೆ ಎಂದು ಕದಸಂಸ ಘಟಕ ಸಂಚಾಲಕ ಗಿರೀಶ್ ಎಂ ಚಟ್ಟೇರಕರ್ ಆಗ್ರಹಿಸಿದರು.
ನಗರದಲ್ಲಿ ಪತ್ರಿಕಾ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, “ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿ ಒಂದು ಕೇಸ್ ಆಗಿ ಮತ್ತೆ ಹೊರಬಂದು, ʼನಮಗೆ ಯಾರ ಭಯವೂ ಇಲ್ಲ, ಯಾವ ಕಾನೂನು ಏನು ಮಾಡುತ್ತೆʼ ಎಂಬ ಅಹಂ ನಿಂದ ಅಪರಾಧಿಗಳು ತಿರುಗಾಡುತ್ತಿದ್ದಾರೆ. ಅಂತವರಿಗೆ ಪೊಲೀಸರು ಗುಂಡೇಟು ಹಾಕಿ ಬುದ್ಧಿ ಕಲಿಸಲು ಮುಂದಾಗಬೇಕು. ಅಲ್ಲಿವರೆಗೆ ಇಂತಹ ಪ್ರಕರಣಗಳು ನಿಲ್ಲಲು ಸಾಧ್ಯವಿಲ್ಲ. ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಈ ರೀತಿ ಕೆಟ್ಟ ಹುಳಗಳನ್ನು ಮಟ್ಟ ಹಾಕದೇ ಹೋದ್ರೆ ಇಡೀ ಸಮುದಾಯದ ನೆಮ್ಮದಿ ಹಾಳು ಮಾಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಯಾದಗಿರಿ| ದೇಶದ ಏಕತೆ, ಸೌಹಾರ್ದತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ: ಹಿರಿಯ ಸಾಹಿತಿ ಶಿವಣ್ಣ ಇಜೇರಿ