ಈ ದಿನ ಕವಿತೆ | ಪಟ್ಟಾಭಿಷೇಕ

Date:

Advertisements

ಅರಸನೊಬ್ಬ ರಾಜದಂಡವಿಡಿದು ಗಂಭೀರ ನಡಿಗೆಯಲಿ
ನಡೆದಿದ್ದಾನೆ ತನ್ನ ಪ್ರಭುತ್ವದ ಮಹತಿಯ ಮಹಲಿನಲಿ

ಹಿಂದೆ ಮುಂದೆ ಸುತ್ತ ಮುತ್ತ ಖಾಷಾಯ ವಸ್ತ್ರಧಾರಿಗಳು
ಜಟಾಧಾರಿಗಳು -ಭಸ್ಮ ಕುಂಕುಮ ಭೂಷಿತ ದೇಹಗಳು
ಸಾವಿರಾರು ಮಂದಿ ವೀಕ್ಷಿಸುತ್ತಾರೆ ಎವೆಯಿಕ್ಕದೆ
ವಿಚಿತ್ರ ದೃಶ್ಯವಿದು
ಅರಸ ಘೋಷಿಸಿದ್ದಾನೆ-ಈ ಮಹಲು ಪ್ರಜಾಪ್ರಭುತ್ವದ ಭವನವೆಂದು
ಆದರೆ, ನಡೆಯುತ್ತಿದೆಯಲ್ಲಿ
ಹವನ ಹೋಮ ಧೂಪ ಧೂಮದ ನಡುವೆ
ಪಟ್ಟಾಭಿಷೇಕ

ಮಹಲಿನ ಹೊರಗೆ
ಪ್ರಭುತ್ವ ಹಾಗೂ ವಿರೋಧಿಗಳ ನಡುವೆ
ನಡೆದಿದೆ ಜಟ್ಟಿ ಕಾಳಗ
ರಾಜಾಜ್ಞೆಯಿದೆ-
ಪಟ್ಟಾಭಿಷೇಕ ವಿರೋಧಿಗಳು ಹದ್ದುಮೀರಿ
ದುರಾಚಾರಕ್ಕಿಳಿದು ತಡೆಯೊಡ್ಡಿದರೆ
ಕಠಿಣ ಶಿಕ್ಷೆಯ ಆದೇಶ

Advertisements

ಆಧಿಪತ್ಯದ ಹಿಂಸೆಯನ್ನಪ್ರಶ್ನಿಸುವ ಜನ, ಮನದ ಮೇಲೆ
ಅಧಿಕಾರದ ಕ್ರೌರ್ಯಭರಿತ ಶಕ್ತಿಯ ಕಟ್ಟೆಯೊಡೆಯಲಾಗಿದೆ
ಕ್ರೌರ್ಯ ಹರಿದಿದೆ

ಅನಿಯಂತ್ರಿತ ದುರಾಚಾರದ ದುಷ್ಟ ರಂಪಾಟದಲ್ಲಿರುವ
ರಾಜಾನುಯಾಯಿಗಳು ರಾಜಾಶ್ರಯದಲ್ಲಿ ರಕ್ಷಿತರು

ನಡೆದಿದ್ದಾನೆ ಅರಸ ಗಂಭೀರನಾಗಿ
ಕರದೊಳಗಿನ ರಾಜದಂಡಕ್ಕಿದೆ ಪುರಾಣಲೇಪಿತ ಪುಣ್ಯ ಘಳ ಘಳ ಹೊಳಪು
ಪ್ರಜೆಗಳ ಕರದ ಜಮಾವಣೆ ಅದ್ದೂರಿಯಾಗಿ ವ್ಯಯವಾಗುತ್ತಿದೆ

ಗರಿಬಿಚ್ಚಿದ ನವಿಲುಗಳು
ಕೊಂಬೆ ಚಾಚಿ ಹಬ್ಬಿದ ಆಲದ ಮರಗಳು
ಅರಳಿದ ತಾವರೆಗಳು
ಸ್ತಬ್ಧವಾಗಿ ಬಂಧಿಯಾಗಿವೆ ಮಹಲಿನ ಗೋಡೆಯಲಿ
ಪಸರಿಸಿದೆ ಮಹಲ ತುಂಬಾ ಭವ್ಯ ಐಷಾರಾಮದ ಕಂಪು

ಅರಸನ ಕಣ್ಣು ಕುಕ್ಕುವ ವೈಭೋಗ
ಜನರನ್ನ ಕುರುಡು ಮಾಡಿದೆ
ಅವನ ಕಂಚಿನ ಕಂಠ ಸಿರಿಯ ಕಟುಮಾಧುರ್ಯ
ನಿದ್ದೆಯ ಅಮಲಿಗೆ ಜಾರಿಸಿದೆ
ಗಂಭೀರನಾಗಿ ನಡೆದಿದ್ದಾನೆ ಅವನು
ಅವರ ದೇಹಗಳ ಮೆಟ್ಟಲಾಗಿಸಿ
ಅವನನುಯಾಯಿಗಳು ಹಿಂಬಾಲಿಸಿದ್ದಾರೆ
ರಕ್ತದ ರಂಗೋಲಿ ಹರಡುತ್ತಾ
ಅವನು ಪಟ್ಟಾಭಿಷಿಕ್ತ ಸಿಂಹಾಸನ ರೂಢನಾದ.

ಇಂಗ್ಲಿಷ್‌ ಮೂಲ : ಪರಿಣಿತಾ ಶೆಟ್ಟಿ

ಕನ್ನಡಕ್ಕೆ : ರಾಜಲಕ್ಷ್ಮಿ/ವರ್ಷಾ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X