ಧಾರವಾಡ ಸತ್ತೂರ ಬಡಾವಣೆಯ, ರಾಜಾಜಿ ನಗರದಲ್ಲಿ ಹೊಸ ಕಾಂಕ್ರೀಟ್ ಗಟಾರ (ಒಳಚರಂಡಿ) ನಿರ್ಮಾಣ ಮಾಡಲು ಒತ್ತಾಯಿಸಿದರು. ಈ ವೇಳೆ ಆಲ್ ಇಂಡಿಯಾ ಕಾಂಗ್ರೆಸ್ ಕಮೀಟಿ ನ್ಯಾಶನಲ್ ಕೋ-ಅರ್ಡಿನೇಟರ್ ಜಗದೀಶ ಘೋಡಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಆಯುಕ್ತ ರುದ್ರೇಶ ಗಾಳಿ ಅವರಿಗೆ ಮನವಿ ಮಾಡಿಕೊಂಡು ಸನ್ಮಾನಿಸಿದರು.
ನಂತರ ಮಾತನಾಡಿದ ಅವರು, ಗಟಾರು ನಿರ್ಮಾಣವಾಗಿ ಎರಡು ದಶಕಗಳು ಕಳೆದಿದ್ದು, ಪ್ರಸ್ತುತ ಬಡಾವಣೆಯಲ್ಲಿಯ ಗಟಾರುಗಳೇ ಮಾಯವಾಗಿವೆ. ಮಳೆಗಾಲದಲ್ಲಿ ನೀರು ಹರಿದು ಹೋಗಲು ಗಟಾರ ವ್ಯವಸ್ಥೆ ಇಲ್ಲದಿರುವುದರಿಂದ, ನೀರು ರಸ್ತೆಯ ಮೇಲೆ ಹರಿದು ಬಂದು, ರಸ್ತೆಯ ಬದಿಗಿರುವ ಮನೆಯೊಳಗೆ ಕೊಳಚೆ ನೀರು ನುಗ್ಗುತ್ತದೆ. ಕಲುಷಿತ ನೀರಿನೊಂದಿಗೆ ವಿಷಜಂತುಗಳು ಸಹ ಮನೆಯೊಳಗೆ ಬರುತ್ತಿವೆ. ಇದರಿಂದ ಜನರು ಜೀವಭಯದಿಂದ ಬದುಕುತ್ತಿದ್ದಾರೆ. ಕಲುಷಿತ ನೀರು ಮನೆಯೊಳಗೆ ಬರುವುದರಿಂದ ರೋಗ ರುಜಿನಗಳಿಗೆ ಹೆದರುವ ವಾತಾವರಣ ಸೃಷ್ಠಿಯಾಗಿದೆ ಎಂದರು.
ಈ ಕುರಿತು ಪವನ ಮಾತನಾಡಿ, ನಾವು ಮತ್ತು ವಿವಿಧ ಸಂಘಟನೆಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಅನೇಕ ಬಾರಿ ಮನ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅದ್ದರಿಂದ ಶೀಘ್ರವಾಗಿ ಈ ಸಮಸ್ಯೆಗೆ ತಾವು ಪರಿಹಾರವನ್ನು ಒದಗಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ವರದಿ ಓದಿದ್ದೀರಾ? ಧಾರವಾಡ | ಆರೋಗ್ಯ ಕ್ಷೇತ್ರದ ಖಾಸಗಿಕರಣ ನಿಲ್ಲಿಸಲು ಅಗ್ರಹಿಸಿ ಕಮ್ಯೂನಿಸ್ಟ್ ಪಕ್ಷ ಬೃಹತ್ ಪ್ರತಿಭಟನೆ
ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಮಾತನಾಡಿ, ಈ ಕುರಿತು ಮಾಹಿತಿ ಸಂಗ್ರಹಿಸಿ ಕಾರ್ಯೋನ್ಮುಖರಾಗುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಹಮ್ಮದ್ಅಲಿ ಗುಡೂಭಾಯಿ, ಮಹದೇವ ಬೋಸ್ಲೇ ಇನ್ನಿತರರು ಇದ್ದರು.