ಯಾವುದೇ ಚಳವಳಿಗಳು ಆ ಕಾಲದ ಒತ್ತಡಗಳಿಂದ ರೂಪುಗೊಳ್ಳುತ್ತವೆ. ಕಾಲ ಗರ್ಭದಲ್ಲಿ ಹೂತುಹೋದ ಪ್ರತಿರೋಧದ ದನಿಗಳು ಮೊಳಕೆಯೊಡೆಯಲೂ ತಕ್ಕ ಕಾಲಕ್ಕೆ ಕಾಯುತ್ತವೆ ಎಂದು ಕಾಣುತ್ತದೆ. ಶತಮಾನಗಳ ದಲಿತ ಸಮುದಾಯದ ನೋವು-ಯಾತನೆಗಳು ಸ್ವಾಭಿಮಾನಿ, ಸಾಂಸ್ಕೃತಿಕ, ಸಾಮಾಜಿಕ ಚಳವಳಿಯಾಗಿ ಬೆಳೆಯಲು ಅಂಥ ಅವಕಾಶಕ್ಕಾಗಿ ಕಾಯುತ್ತಿದ್ದವು. ಅಂಥ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಒತ್ತಡ ಎಪ್ಪತ್ತರ ದಶಕದಲ್ಲಿ ನಿರ್ಮಾಣವಾಗಿತ್ತು. ದಲಿತ ಚಳವಳಿ ಹುಟ್ಟಿದ ಆ ದಿನಗಳನ್ನು ಮೆಲುಕು ಹಾಕಿದರೆ ಇದು ನಿಜ ಎನಿಸುತ್ತದೆ. ನೂರಾರು ಸನ್ನಿವೇಶಗಳು, ಘಟನೆಗಳು, ನೋವು-ನಲಿವುಗಳು ಮನಸ್ಸಿನ ಪರದೆ ಮೇಲೆ…

ಇಂದೂಧರ ಹೊನ್ನಾಪುರ
ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನರಾದ ಇಂದೂಧರ ಹೊನ್ನಾಪುರ ಅವರು ಕರ್ನಾಟಕ ದಲಿತ ಚಳವಳಿಯನ್ನು ಕಟ್ಟಿದವರಲ್ಲಿ ಒಬ್ಬರು. ದಲಿತ ಚಳವಳಿಯ ಭಾಗವಾಗಿದ್ದ 'ಪಂಚಮ' ಪತ್ರಿಕೆಯನ್ನು ಮುನ್ನಡೆಸಿದರು. 'ಪ್ರಜಾವಾಣಿ'ಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ಸಂವಾದ' ಮಾಸಿಕದ ಸಂಪಾದಕರಾಗಿದ್ದಾರೆ. 'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿವೆ.