ಉಡುಪಿ ಜಿಲ್ಲೆಯ ಬೆಳ್ಳಂಪಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಫಿಶ್ ಫ್ಯಾಕ್ಟರಿ ಹೋಗುವ ದಾರಿಯ ಹತ್ತಿರ ನಿಂತಿದ್ದ ಒಬ್ಬ ಅಮಾಯಕ ದಲಿತ ವ್ಯಕ್ತಿಯನ್ನ ಅವನ ಮೇಲೆ ಕಳೆದ ಜನವರಿ 23ರಂದು ಪೊಲೀಸ್ ಠಾಣೆಯಲ್ಲಿ ಯಾವ ದೂರು ಮತ್ತು ಪ್ರಕರಣ ಕೂಡ ಇಲ್ಲದಿದ್ದರೂ ವ್ಯಕ್ತಿಯನ್ನು ಕಾರಣವೇ ಇಲ್ಲದೆ ಹಿರಿಯಡಕ ಪೊಲೀಸ್ ಠಾಣೆಯ PSI ಸಿಬ್ಬಂದಿಗಳು ಮನುಷತ್ವನೇ ಇಲ್ಲದೆ ಆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ದಲಿತರ ಮೇಲೆ ಕಾಳಜಿ ವಹಿಸದೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಳ್ಳದೆ ಅಧಿಕಾರದ ಮತ್ತಿನಲ್ಲಿ, ಅಧಿಕಾರದ ಕುರ್ಚಿಯಲ್ಲಿ ಕೂತು ದಲಿತರ ಮೇಲೆ ದೌರ್ಜನ್ಯವಾಗುತ್ತಿರುವುದನ್ನು ನೋಡಿ ಚೆಲ್ಲಾಟವಾಡುತ್ತಿರುವದನ್ನು ಕಂಡರೆ ವಿಪರ್ಯಾಸವೆನ್ನಿಸುತ್ತಿದೆ ಎಂದು ದಲಿತ ಪರ ಸಂಘಟಕರು ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಏಟಿನಿಂದ ದಿನೇ ದಿನೇ ಆರೋಗ್ಯದಲ್ಲಿ ಜರ್ಜರಿತನಾಗುತ್ತಿರುವ ದಲಿತ ಯುವಕ ಭಾಸ್ಕರ್ ಗಿಳಿಯಾರ್ ರವರಿಗೆ ಮುಂಚೆಯೇ ಬಲಗೈ ಮುಳೆ ಮುರಿದಿರುವ ಕಾರಣ ಕೈನಲ್ಲಿ ರಾಡನ್ನು ಶಸ್ತ್ರಚಿಕಿತ್ಸೆ ಮಾಡಿ ಅಳವಡಿಸಲಾಗಿತ್ತು ಆತನ ದುರದೃಷ್ಟವೇನೆಂದರೆ ಪೊಲೀಸರು ಒಡೆದಿರುವ ಒಡೆತದ ಪೆಟ್ಟು ಬಲವಾಗಿ ಪುನಃ ಅದೇ ಕೈಗೆ ಬಿದ್ದಿದೆ ಆದ್ದರಿಂದ ಭಾಸ್ಕರ್ ರವರಿಗೆ ಮತೊಮ್ಮೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಘಟನೆಯ ಬಗ್ಗೆ ನ್ಯಾಯ ಕೇಳಲು ಮುಂದಾದಗ ಪೊಲೀಸರ ಬೂಟಿನೇಟಿನಾ ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಮೇಲೇನೆ (BNSS)ಕಲಾಂ 35(3) ಪ್ರಕರಣ ದಾಖಲಿಸಿ ತಾವು ಮಾಡಿರುವ ಕೃತ್ಯದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿರುವದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಭಾಸ್ಕರ್ ಗಿಳಿಯಾರ್ ಸಹೋದರಿ ಪತ್ರಕರ್ತೆ ಆರತಿ ಗಿಳಿಯಾರ್ ಹೇಳಿದ್ದಾರೆ.

ಈ ಬಗ್ಗೆ ಈಗಾಗಲೇ ಉಡುಪಿಯ ಕಾಂಗ್ರೆಸ್ ಮುಖಂಡರು, ದಲಿತ ಪರ ಹೋರಾಟಗಾರರು ಹಲ್ಲೆಗೊಳಗಾದ ಭಾಸ್ಕರ್ ರವರನ್ನು ಭೇಟಿಯಾಗಿ ಹಲ್ಲೆಮಾಡಿದವರ ಮೇಲೆ ಸರಿಯಾದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಅಧಿಕಾರ ದುರುಪಯೋಗ ಮಾಡಿಕೊಂಡು ನಾಗರಿಕರ ಮೇಲಿನ ದೌರ್ಜನ್ಯಕ್ಕೆ ಒಲವು ತೋರುತ್ತಿದ್ದಾರೆ ಎಂಬ ಆರೋಪವನ್ನು ಮುಂದಿಟ್ಟು, ದೋಷಿಗಳನ್ನು ಶಿಕ್ಷೆಗೆ ಒಳಪಡಿಸಲು ಆಗ್ರಹಿಸಿದರು. ಅವರು ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಿ, ನ್ಯಾಯ ಒದಗಿಸಬೇಕು ಎಂಬ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ ನಾಗೇಂದ್ರ ಪುತ್ರನ್ ಸರ್ಕಾರಿ ಸಂಬಳ ಪಡೆದು ಸಾರ್ವಜನಿಕರ ಸೇವೆ ಮಾಡುವ ಪೊಲೀಸರಿಂದ ಈ ರೀತಿಯ ವರ್ತನೆ ನಿರೀಕ್ಷಿಸಲು ಸಾಧ್ಯವಿಲ್ಲ. ಜನರ ಗೌರವಕ್ಕೆ ಪಾತ್ರರಾಗಬೇಕಾದವರು, ಬಾಯಿಗೆ ಬಂದಂತೆ ಬೈದು, ಸಾರ್ವಜನಿಕರ ಮೇಲೆ ಹಲ್ಲೆ ನಡೆಸುವುದು ಪೊಲೀಸರಿಗೆ ಶೋಭೆ ತರುವ ವಿಷಯವಲ್ಲ, ಈ ಘಟನೆ ಪೊಲೀಸರ ವಿರುದ್ಧದ ಸಾರ್ವಜನಿಕ ವಿಶ್ವಾಸ ಕುಸಿಯುವಂತೆ ಮಾಡಿದ್ದು, ಉಡುಪಿ ಜಿಲ್ಲೆಯಲ್ಲಿ ಇಂತಹ ಘಟನೆಗಳು ಪುನರಾವೃತ್ತಿಯಾಗಬಾರದು ಎಂಬ ದೃಷ್ಟಿಯಿಂದ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. “ಅಪರಾಧಿಗಳಿಗೆ ಶಿಕ್ಷೆ ನೀಡಲು ನ್ಯಾಯಾಂಗವಿದೆ, ಕಾರ್ಯನಿರ್ವಹಿಸುವ ಪೊಲೀಸರು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
