ಗಾಂಜಾ ಮಾರಾಟದಲ್ಲಿ ತೊಡಗಿದ್ದ 4 ಜನ ಯುವಕರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಕಸಬಾಪೇಟ್ ಠಾಣೆಯ ಪೊಲೀಸರು ಯಶ್ವಿಯಾಗಿದ್ದಾರೆ.
ಸುಲೇಮಾನ್ ಸಿದ್ದಿ (18), ಸಂತೋಷ್ ಪಾಟೀಲ್ (18), ಇಸ್ಮಾಯಿಲ್ ಟಪಾಲ್ (23) ಈ ಮೂವರು ಬಂಧಿತ ಆರೋಪಿಗಳು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿಗಳು. ಇನ್ನೋರ್ವ ಬಂಧಿತ ಆರೋಪಿ ಆಕಾಶ ಗಂಗಣ್ಣವರ (19) ಹಾವೇರಿ ಜಿಲ್ಲೆಯ ಹುಲಗೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಆರೋಪಿಗಳು ಹುಬ್ಬಳ್ಳಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕಸಬಾ ಪೇಟ್ ಠಾಣೆಯ ಪೊಲೀಸರು 4 ಜನರನ್ನು ಬಂಧಿಸಿದ್ದು, ಬಂಧಿತರಿಂದ ಸುಮಾರು 62,050/- ರೂಪಾಯಿ ಮೌಲ್ಯದ 1240 ಗ್ರಾಂ ಗಾಂಜಾ ಮತ್ತು 400/- ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ? ಧಾರವಾಡ | ಸತ್ತೂರು ಒಳಚರಂಡಿ ನಿರ್ಮಾಣಕ್ಕೆ ಒತ್ತಾಯ: ನೂತನ ಆಯುಕ್ತರಿಗೆ ಮನವಿ
ಈ ಕುರಿತು ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 4 ಜನ ಆರೋಪಿಗಳನ್ನು ಜೈಲಿಗೆ ರವಾನಿಸಿದ್ದಾರೆ.