ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಬಸವರಾಜ ತಲ್ಲೂರ ಅವರು ತಮ್ಮ ಹುಟ್ಟ ಹಬ್ಬವನ್ನು ಕೇಕ್ ಕತ್ತರಿಸದೆ, ಪರಿಸರ ನಾಶಕ್ಕೆ ಎಡೆಮಾಡಿಕೊಡದೆ, ಸ್ವಚ್ಛತೆಯ ಅರಿವು ಮೂಡಿಸುವ ಸಲುವಾಗಿ, ಪರಿಸರ ಖಾಳಜಿಯೊಂದಿಗೆ ವಿಭಿನ್ನವಾಗಿ ಆಚರಸಿಕೊಂಡಿದ್ದು, ಮಾದರಿ ಹುಟ್ಟುಹಬ್ಬವಾಗಿದೆ. ಆ ಹಿನ್ನೆಲೆಯಲ್ಲಿ ಅವರ ವಿದ್ಯಾರ್ಥಿಗಳು ನಗರವನ್ನು ಸ್ವಚ್ಛಗೊಳಿಸುವ ಮೂಲಕ ತಮ್ಮ ಗುರುಗಳಿಗೆ ಜನುಮದಿನದ ವಿಶಿಷ್ಠ ಉಡುಗೊರೆ ನೀಡಿದ್ದಾರೆ ಎಂದು ಡಾ. ವಿಲಾಸ ಕುಲಕರ್ಣಿ ಹೇಳಿದರು.
ಇಂದು ಬೆಳಿಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಶ್ರೀನಗರದ ಉದ್ಯಾನವನ ಹಾಗೂ ನಗರದ ಕೆಲ ರಸ್ತೆಗಳಲ್ಲಿ ಸ್ವಶ್ಚತೆ ಮಾಡುವುದರ ಮೂಲಕ ಹುಟ್ಟು ಹಬ್ಬವನ್ನು ಅಚರಿಸಿದ್ದು, ಈ ರೀತಿಯ ವಿಶಿಷ್ಟ ಆಚರಣೆಯು ಸತತ 5 ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಈ ತರಹದ ಜನುಮದಿನದ ಆಚರಣೆ ನಮಗೂ ರೂಢಿಯಾಗಿದೆ ಅನ್ನುತ್ತಾರೆ ವಿದ್ಯಾರ್ಥಿಗಳು.
ಡಾ. ವಿಲಾದ ಕುಲಕರ್ಣಿ ಮುಂದುವರೆದು ಮಾತನಾಡಿ, ಹುಟ್ಟು ಹಬ್ಬ ಅಂದಾಕ್ಷಣ ಕೆಲವರು ಕೇಕ್ ಕತ್ತರಿಸಿ, ಮೊಟ್ಟೆ ಹೊಡೆದು ಪರಿಸರ ನಾಶ ಮಾಡುವ ರೀತಿಯಲ್ಲಿ ತಮ್ಮ ಜನುಮದಿನ ಆಚರಸಿಕೊಳ್ಳುತ್ತಾರೆ. ಆದರೆ ಬಸವರಾಜ ತಲ್ಲೂರ ಅವರು ಸ್ವಚ್ಛತಾ ಕಾರ್ಯದ ಮೂಲಕ, ಪರಿಸರದ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿರುವುದು ಬಹಳ ಖುಷಿತಂದಿದೆ. ಈ ರೀತಿಯ ಹುಟ್ಟು ಹಬ್ಬವು ಎಲ್ಲರಿಗೂ ಮಾದರಿ ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ದಾಸೋಹದ ಮೂಲಕ ಮುರುಘಾಮಠ ಪ್ರಸಿದ್ಧಿಯಾಗಿದೆ: ಅರವಿಂದ ಬೆಲ್ಲದ
ಎಸ್ ಅರ್ ತಲ್ಲೂರ್ ಪೌಂಡೇಶನ್ ಕಾರ್ಯದರ್ಶಿ ಡಾ.ಸುಮಾ ತಲ್ಲೂರ, ಪರಿಸರ ಪ್ರೇಮಿ ಪ್ರಭು ಕೊಂಗಿ, ಸದಸ್ಯ ಮಹೇಶ ತಲ್ಲೂರ, ಶ್ರೀನಗರದ ನಿವಾಸಿಗಳು ಹಾಗೂ ವಿದ್ಯಾರ್ಥಿಬಳಗ ಉಪಸ್ಥಿತರಿದ್ದರು.