ಇನ್ನು ಮೂರು ದಿನಗಳಲ್ಲಿ (ಫೆ.5) ದೆಹಲಿ ವಿಧಾನಸಭೆಗೆ ಮತದಾನ ನಡೆಯಲಿದೆ. ಚುನಾವಣೆಗೆ ಎಲ್ಲ ಪಕ್ಷಗಳು ಭಾರೀ ಸಿದ್ದತೆ ನಡೆಸುತ್ತಿವೆ. ಇಂತಹ ಸಮಯದಲ್ಲಿ ಆಡಳಿತಾರೂಢ ಎಎಪಿಯ 8 ಶಾಸಕರು ಮತ್ತು ಕೆಲ ಕೌನ್ಸಿಲರ್‌ಗಳು ಪಕ್ಷ ತೊರೆದು, ಬಿಜೆಪಿ ಸೇರಿದ್ದಾರೆ.
ಎಎಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದ ಭಾವನಾ ಗೌರ್, ಮದನ್ ಲಾಲ್, ಗಿರೀಶ್ ಸೋನಿ, ರಾಜೇಶ್ ರಿಷಿ, ನರೇಶ್ ಯಾದವ್, ಪವನ್ ಶರ್ಮಾ, ಬಿಎಸ್ ಜೂನ್, ರೋಹಿತ್ ಮೆಹ್ರೋಲಿಯಾ ಹಾಗೂ ಮಾಜಿ ಶಾಸಕ ಬಿಜೇಂದ್ರ ಗಾರ್ಗ್ ಮತ್ತು ಕೌನ್ಸಿಲರ್‌ಅಜಯ್ ರೈ ಪಕ್ಷ ತೊರೆದಿದ್ದಾರೆ. ತಾವು ಪಕ್ಷ ತೊರೆಯಲು ಪಕ್ಷದ ಮೇಲಿನ ಭ್ರಷ್ಟಾಚಾರ ಆರೋಪಗಳು ಕಾರಣವೆಂದು ಹೇಳಿಕೊಂಡಿದ್ದಾರೆ.
ಕೇಜ್ರಿವಾಲ್ ನೇತೃತ್ವದಲ್ಲಿ ಪಕ್ಷವು ತನ್ನ ಸಿದ್ದಾಂತಗಳಿಂದ ವಿಮುಖಗೊಂಡಿದೆ ಎಂದೂ ಆರೋಪಿಸಿದ್ದಾರೆ.
ಗಮನಾರ್ಹವೆಂದರೆ ಈ ಆರು ಮಂದಿಗೂ ಈ ಬಾರಿಯ ಚುನಾವಣೆಯಲ್ಲಿ ಎಎಪಿ ಟಿಕೆಟ್ ನೀಡಿರಲಿಲ್ಲ.
ಇದರಲ್ಲಿ ಯಾವ ಆಶ್ಚರ್ಯವೂ ಇಲ್ಲ,, ಚಂದಾ ವಸೂಲಿ ಮಾಡಿ ಸಾವಿರಾರು ಕೋಟಿ ಪಕ್ಷದಲ್ಲಿ ಇದೆ,, ದಿಲ್ಲಿಯಲ್ಲಿ ಸೋಲಿನ ಭೀತಿ ಕಾಡುತ್ತಿದೆ,, ಎಲ್ಲಕ್ಕೂ ಮಿಗಿಲಾಗಿ ಇತ್ತೀಚೆಗೆ ಕುಂಭಮೇಳದಲ್ಲಿ ಡುಮ್ಕಿ ಹೊಡೆದು ಹಿಂದಿನ ಎಲ್ಲಾ ಬ್ರಹ್ಮಾಂಡ ಪಾಪಗಳನ್ನು ಗಂಗೆ ಒಡಲಿಗೆ ಸೇರಿಸಿದರು,, ಮುಂದಿನ ದಿನಗಳಲ್ಲಿ ಅಧಿಕಾರಕ್ಕಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅನಾಚಾರ ಪಾಪಗಳನ್ನು ಮಾಡಲು ಲೈಸೆನ್ಸ್ ರಿನಿವಲ್ ಮಾಡಿಕೊಂಡು ಬಂದ ತಕ್ಷಣ ಪಾಪದ ವ್ಯಾಪಾರ ಸುರು ಹಚಗೊಂಡಿರಬಹುದು