ಅರೆಸೇನಾ ಪಡೆಗಳ ಯೋಧರು ಮತ್ತು ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, 18 ಮಂದಿ ಯೋಧರು ಸೇರಿದಂತೆ 41 ಮಂದು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದಿದೆ.
ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರ ಮಾಡಬೇಕೆಂದು ಒತ್ತಾಯಿಸುತ್ತಿರುವ ಬಂಡುಕೋರ ಸಂಘಟನೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (ಬಿಎಲ್‍ಎ) ಇತ್ತೀಚೆಗೆ ಸಕ್ರಿಯವಾಗಿದೆ. ಬಿಎಲ್‌ಎ ಸಂಘಟನೆಯ ಒಂಡುಕೋರರೇ ದಾಳಿ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಸೈಯದ್ ಮುನೀರ್ ಅವರು ಬಲೂಚಿಸ್ತಾನಕ್ಕೆ ಶನಿವಾರ ಭೇಟಿ ನೀಡಿದ್ದರು. ಈ ವೇಳೆ, ಅರೆಸೇನಾ ಪಡೆಯ ಸೈನಿಕರ ಮೇಲೆ ದಾಳಿ ನಡೆದಿದೆ. ಬಲೂಚಿಸ್ತಾನದ ಮಂಗೋಚಾರ್ ಗ್ರಾಮದ ಬಳಿ ಅರೆಸೇನಾ ಪಡೆದ ಯೋಧರು ಪ್ರಯಾಣಿಸುತ್ತಿದ್ದಾಗ, ಅವರನ್ನು ಬಂಡುಕೋರರು ಅಡ್ಡಗಟ್ಟಿದ್ದು, ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿ-ಪ್ರತಿದಾಳಿಯಲ್ಲಿ 18 ಮಂದಿ ಯೋಧರು, 23 ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಆದಾಗ್ಯೂ, ಈವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.