ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಪಟ್ಟಣ ಪಂಚಾಯತ್ ಅಧಿಕಾರಿ ಅಕ್ರಂ ಅವರಿಗೆ ಮನವಿ ಸಲ್ಲಿಸಿತು.
“ಪಟ್ಟಣದಲ್ಲಿ ಸಾವಿರಾರು ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ವಾಸಿಸುತ್ತಿದ್ದಾರೆ. ಸದರಿ ಪಟ್ಟಣದಲ್ಲಿ ಅಂಬೇಡ್ಕರ್ ಭವನದ ಅವಶ್ಯಕತೆ ಇದ್ದು, ಭವನ ನಿರ್ಮಾಣ ಮಾಡುವುದು ಪಟ್ಟಣದ ಬಹುಜನರ ಬೇಡಿಕೆಯಾಗಿದೆ. ಈಗಾಗಲೇ ಹಟ್ಟಿ ಪಟ್ಟಣದ ಬುದ್ದಿನ್ನಿ ಲೇಔಟ್‌ನಲ್ಲಿ ಸ್ಥಳ ಕೂಡಾ ಬಹಳಷ್ಟು ವರ್ಷಗಳಿಂದ ಮೀಸಿಲಿರಿಸಿದ್ದು, ಇಲ್ಲಿಯವರೆಗೂ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಸ್ಥಳ ಮೀಸಲಿಟ್ಟು ಬಹಳ ವರ್ಷಗಳೇ ಕಳೆದರೂ ಭವನದ ವಿಚಾರದಲ್ಲಿ ಮೀನಾಮೇಷ ಎಣಿಸುವುದು ದೇಶದ ಸಂವಿಧಾನ ಶಿಲ್ಪಿಗೆ ಮಾಡುವ ಅತೀ ದೊಡ್ಡ ಅಗೌರವ ಎನಿಸಿಕೊಳ್ಳುತ್ತದೆ. ಅವರಿಗೆ ಸೂಕ್ತ ಗೌರವ ನೀಡುವುದು ದೇಶದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಕನ್ನಡ ಕನಸುಗಳನ್ನು ಒಂದೆಡೆ ಸೇರಿಸುವ ಕೆಲಸವಾಗಬೇಕಿದೆ: ಹಿರಿಯ ಸಾಹಿತಿ ಮುಕ್ಕುಂದಿ
ಠರಾವ್ ಪಾಸ್ ಮಾಡದೇ ಹೋದಲ್ಲಿ ಮುಂದೆ ನಡೆಯುವ ಹೋರಾಟಕ್ಕೆ ತಾವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಯಲ್ಲಪ್ಪ ಮಾಚನೂರು, ಪ್ರಶಾಂತ ದೀನ ಸಮುದ್ರ ಇನ್ನಿತರರು ಹಾಜರಿದ್ದರು.
