ರಸ್ತೆ ಮೇಲೆ ವೀಲಿಂಗ್ ಮಾಡಿದ ಚಾಲಕನೊಬ್ಬನಿಗೆ ಶಿವಮೊಗ್ಗ ನ್ಯಾಯಾಲಯವು ನಿನ್ನೆ (ಫೆ.3) ₹5000 ದಂಡ ವಿಧಿಸಿದೆ.
ನಗರದ ಗೌರವ್ ಲಾಡ್ಜ್ ಬಳಿ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್, ಸಿಬ್ಬಂದಿ ಪ್ರಕಾಶ್ ಎಆರ್‌ಎಸ್‌ಐ ಪ್ರವೀಣ್ ಪಾಟೀಲ್, ಎಚ್‌ಸಿ ದಿನೇಶ್ ಪಿ ಸಿ, ಹರೀಶ್ ಪಿ ಸಿ ಇವರು ವಾಹನಗಳ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಚಾಲಕನೊಬ್ಬ ಬೈಕ್ ವೀಲಿಂಗ್ ಮಾಡಿದ್ದು ಕಂಡುಬಂದಿದ್ದು, ಸದರಿ ವಾಹನದ ಚಾಲಕನಿಗೆ ನೋಟಿಸ್ ನೀಡಿ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಲಾಗಿತ್ತು. ಅದರಂತೆ ಶಿವಮೊಗ್ಗ ನ್ಯಾಯಾಲಯ ಬೈಕ್ ಚಾಲಕನಿಗೆ ದಂಡ ವಿಧಿಸಿದೆ.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಮಹಿಳೆಯರು, ದುರ್ಬಲರನ್ನು ಯುಜಿಸಿ ಶಿಕ್ಷಣದಿಂದ ವಂಚಿಸುತ್ತಿದೆ: ಪ್ರೊ. ಎಚ್ ರಾಜಾಸಾಬ್
