ಪ್ಲಾಸ್ಟಿಕ್ ಮತ್ತು ರಟ್ಟಿನಿಂದ ಮಾಡಿದ ಚಹಾ ಕಪ್‌ಗಳನ್ನು ನಿಷೇಧಿಸುವಂತೆ ಕೊಪ್ಪಳ ಜನಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
“ಕೊಪ್ಪಳ ನಗರಸಭೆಯಲ್ಲಿ ನಡೆಯುವ ತುರ್ತು ಸಭೆಗಳು, ಸಾಮಾನ್ಯ ಸಭೆಗಳು, ಅಧಿಕಾರಿಗಳ ಸಭೆಗಳು, ಶಾಸಕರ, ಸಚಿವರುಗಳ ಪರಿಶೀಲನಾ ಸಭೆಗಳಲ್ಲಿ ಇದೇ ಪ್ಲಾಸ್ಟಿಕ್ ಕಪ್‌ಗಳನ್ನು ಬಳಲಾಗುತ್ತಿದೆ. ಇದರಿಂದ ಮಾನವನ ಆರೋಗ್ಯಕ್ಕೆ ಹಾನಿಕಾರಕ ಎಂದು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗುತ್ತಲೇ ಇವೆ. ಅಂತಹ ಹಾನಿಕಾರಕ ಕಪ್ ಬಳಕೆಯನ್ನು ನಿಷೇಧ ಮಾಡದೆ ಸಾಮಾನ್ಯ ಕಾರ್ಯಕ್ರಮಗಳಲ್ಲೂ ಬಳಕೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ವಿಪರ್ಯಾಸ. ಆರೋಗ್ಯದ ದೃಷ್ಟಿಯಿಂದ ಬಹುತೇಕ ಹೋಟೆಲ್‌ಗಳಲ್ಲಿ ಬಳಕೆಯಲ್ಲಿರುವ ಪ್ಲಾಸ್ಟಿಕ್ ಹಾಗೂ ರಟ್ಟಿನ ಚಹಾ ಕಪ್‌ಗಳನ್ನು ನಿಷೇಧಿಸಲು ನಗರಸಭೆ ಕ್ರಮ ಕೈಗೊಳ್ಳಬೇಕು” ಎಂದು ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್ ಎ ಗಫಾರ್, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಶಾ ಪಲ್ಟನ್ ಅವರಿಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಎಸ್‌ಯುಸಿಐ ಆಗ್ರಹ
ಒಕ್ಕೂಟದ ಮನವಿಯಂತೆ ಪ್ಲಾಸ್ಟಿಕ್ ಹಾಗೂ ರಟ್ಟಿನ ಚಹಾ ಕಪ್‌ಗಳನ್ನು ನಗರಸಭೆಯ ಸಭೆಗಳಲ್ಲಿ ಮತ್ತು ನಗರದ ಹೋಟೆಲ್ ಗಳಲ್ಲಿ ನಿಷೇಧಿಸಲು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದು ಜಾರಿ ಮಾಡಿಸಲು ಪ್ರಯತ್ನಿಸುತ್ತೇನೆ ಎಂದು ಅಕ್ಬರ್ ಪಾಶಾ ಆಶ್ವಾಸನೆ ನೀಡಿದರು.
