ಮಳೆಗಾಲದಲ್ಲಿ ಹಾಗೂ ಬೇಸಿಗೆ ಕಾಲದಲ್ಲಿ ಬಹಳ ತೊಂದರೆ ಆಗುತ್ತಿದೆ. ಜನರಿಗೆ ಅನುಕೂಲಕ ಆಗುವಂತೆ ತಡಸ ಗ್ರಾಮಕ್ಕೆ ಮಿನಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಕರವೇ ಗಜಪಡೆ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಒತ್ತಾಯಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತಡಸ ಗ್ರಾಮದಲ್ಲಿ ಮಿನಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗಜಪಡೆ ಕಂಟ್ರೋಲರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡದರು.
“ಸಾರ್ವಜನಿಕರ ಅನುಕೂಲಕ್ಕಾಗಿ ತಡಸ ಗ್ರಾಮ ಪಂಚಾಯತ್ ಎದುರು ಗಡೆ ಹುಬ್ಬಳ್ಳಿ ಶಿರಸಿ ರೋಡ್ ಪಕ್ಕ ಒಂದು ಮಿನಿ ಬಸ್ ನಿಲ್ದಾಣ ಅವಶ್ಯಕತೆ ಇರುತ್ತದೆ. ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶೇಷವಾಗಿ ವಿಧ್ಯಾರ್ಥಿಗಳಿಗೆ ವೃದ್ಧರಿಗೆ ಹಾಗೂ ವಿಶೇಷ ಚೇತನರಿಗೆ ಸಮಸ್ಯೆ ಆಗುತ್ತಿದೆ. ಕೂಡಲೇ ಮಿನಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು” ಎಂದು ಒತ್ತಾಯಿಸಿದರು.
ಒಂದು ವೇಳೆ ಮಿನಿ ಬಸ್ ನಿಲ್ದಾಣ ನಿರ್ಮಾಣ ಮಾಡದಿದ್ದಲ್ಲಿ ಜಿಲ್ಲಾ ಕೇಂದ್ರ ಕಛೇರಿ ಎದುರಿಗೆ ಅಹೋರಾತ್ರಿ ಧರಣಿ ಮಾಡಲಾಗುವುದು ಎಂದು ಯಲ್ಲಪ್ಪ ಮರಾಠೆ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ತುಂಗಾ ಮೇಲ್ದಂಡೆ ಕಾಲುವೆ ನೀರು ಸೋರಿಕೆ; ಅವೈಜ್ಞಾನಿಕ ಕಾಮಗಾರಿ ವಿರುದ್ಧ ಸ್ಥಳೀಯರ ಆಕ್ರೋಶ
ಈ ಒಂದು ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶಂಕರ ಬಡಿಗೇರ, ಜಿಲ್ಲಾ ಗೌರವಾಧ್ಯಕ್ಷ ಗಂಗಾಧರಯ್ಯ ಪಾಟೀಲ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾಬಾಯಿ ಲಮಾಣಿ, ಜಿಲ್ಲಾ ಉಪಾಧ್ಯಕ್ಷ ಯೊಸುಫ್ ಸೈಕಲಗಾರ, ವಾಗೀಸ್ ಎಮ್ಮಿ, ಬಸವರಾಜ ಪಟ್ಟಣಶೆಟ್ಟಿ , ಈರಪ್ಪ ಅಂಗಡಿ , ರೇಶ್ಮಾ ಬೀರಬ್ಬಿ,ರವಿ ಮಾಮನಿ, ಜ್ಯೋತಿ ಅರಕಸಾಲಿ, ಮಹಾವೀರ ಹಳ್ಳಿಯವರ, ರಾಮಣ್ಣ ಕಂಮಾರ,ಕಾಸಪ್ಪ ಪೂಜಾರ, ಈರಣ್ಣ ಬೋಸ್ಲೆ, ಸಿದ್ದಯ್ಯ ಹಿರೇಮಠ್ , ಬ್ರಹ್ಮಾನಂದ ಕಮ್ಮಾರ್, ನಾಗರಾಜ್ ಬಡಿಗೇರ್ , ಅದು ಕೊಲ್ಲಾಪುರ್ , ರವಿ ಪಾಸ್ಟರ , ಮೂಗಣ್ಣ ತಡಸ, ಕೃಷ್ಣ ಬಡಿಗೇರ್ , ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
