ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ ಎಸ್ ದ್ವಾರಕನಾಥ್ ನಾಮನಿರ್ದೇಶನಕ್ಕೆ ಆಗ್ರಹ

Date:

ಅಲೆಮಾರಿ ಸಮುದಾಯಗಳ ಗಟ್ಟಿಧ್ವನಿ, ಸಾಹಿತಿ, ಒಬಿಸಿ ಆಯೋಗದ ಮಾಜಿ ಅಧ್ಯಕ್ಷ, ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ, ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಡಾ. ಸಿ ಎಸ್ ದ್ವಾರಕನಾಥ್ ಅವರನ್ನು ವಿಧಾನ ಪರಿಷತ್‌ನ ತೆರವಾದ ನಾಲ್ಕು ಸ್ಥಾನಗಳಲ್ಲಿ, ಒಂದು ಸದಸ್ಯ ಸ್ಥಾನಕ್ಕೆ ಈ ಬಾರಿ ಕಾಂಗ್ರೆಸ್ ಪಕ್ಷ ನಾಮನಿರ್ದೇಶನಗೊಳಿಸಬೇಕು. ಈ ಮೂಲಕ ಕಾಂಗ್ರೆಸ್ ಅಲೆಮಾರಿಗಳ ರಾಜಕೀಯ ಅಸ್ಮಿತೆಗಾಗಿ ಮೇಲ್ಮನೆಯ ಮೂಲಕ ರಾಜಕೀಯದ ಪ್ರಾತಿನಿಧ್ಯದ ಅರಿವು ನೀಡಿದ್ದೇವೆಂದು ಹಮ್ಮಿನಿಂದ ಬೀಗಿಕೊಳ್ಳಲಿ ಎಂದು ಬರಹಗಾರ, ಯುವ ವಕೀಲ ಶಿವರಾಜ್ ಮೋತಿ ಅಭಿಪ್ರಾಯಪಟ್ಟರು.

- Advertisement -

ಸಿ ಎಸ್ ದ್ವಾರಕಾನಾಥ್ ಅವರು ಕಳೆದ ನಲವತ್ತು ವರ್ಷಗಳಿಂದ ಜನಪರ ಸಂಘಟನೆಗಳು, ಚಳವಳಿಗಳ ಜತೆಗೆ ಈ ನೆಲದ ಸಂಕಟಗಳ ಬಗ್ಗೆ ನಿರ್ಗತಿಕ, ತಬ್ಬಲಿ ಅಲೆಮಾರಿಗಳ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದು, ʼಅಲೆಮರಿಗಳೂ ಈ ದೇಶದ ಪ್ರಜೆಗಳು ಪಶುಗಳಲ್ಲʼವೆಂದು ಚಿಂತಿಸಿ ಸದಾ ಬರಹಗಳ ಮೂಲಕ ಹಾಗೂ ಸಂವಹನಗಳ ಮೂಲಕ ಅಲೆಮಾರಿಗಳ ವಿಷಯವನ್ನು ಮುನ್ನಲಗೆ ತರುತ್ತಲೇ ಇರುತ್ತಾರೆ. ಸ್ವತಃ ಹಿಂದುಳಿದ ಬಲಿಜ(ಕಮ್ಮ) ಜನಾಂಗಕ್ಕೆ ಸೇರಿದವರಾದರೂ ನಿಷ್ಠುರತೆಯ ಇವರು ಕೋಲಾರದವರು. ಅಲೆಮಾರಿಗಳಿಗೆ ಗುರುತು ಕೊಟ್ಟ, “ದ್ವಾರಕನಾಥ್ ಮೊದಲು ಕೋಲಾರದಲ್ಲಿ ಅಹಿಂದ ಸಂಘಟನೆ ಮಾಡಿದ್ದು, ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾಗಿ ಸ್ವತಃ ಇಂದಿನ ಮುಖ್ಯಮಂತ್ರಿಳೇ ಸದನದಲ್ಲಿ ಹೇಳಿರುವುದ ಗಮನಾರ್ಹ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಲಂಕೇಶ್ ಪತ್ರಿಕೆಯಲ್ಲಿದ್ದಾಗ ಇಪ್ಪತ್ತು ವರ್ಷಗಳ ಕಾಲ ಕಾಂಗ್ರೆಸ್‌ನ ಕಡು ಟೀಕಾಕಾರ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಮೂರು ವರ್ಷದ ಹಿಂದೆ ಪಕ್ಷಕ್ಕೆ ಸೇರ್ಪಡೆಯಾಗಿ, ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯಾದ್ಯಂತ ಟೊಂಕಕಟ್ಟಿ ಸುತ್ತಿ ಅಲೆಮಾರಿ, ಬುಡಕಟ್ಟು, ಆದಿವಾಸಿ ಒಟ್ಟಾರೆ ಅಲ್ಲಲ್ಲಿ ಸಣ್ಣಸಣ್ಣದಾಗಿ ಛಿದ್ರವಾಗಿ ಒಡೆದುಹೋಗಿರುವ ನಿರ್ಗತಿಕ ಅಲೆಮಾರಿಗಳ ಕೇರಿಗೆ ತೆರಳಿ ಅವರ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ತರುವಲ್ಲಿ ಶ್ರಮ ಹಾಕಿ ಅತ್ಯಂತ ಯಶಸ್ವಿಯಾಗಿದ್ದಾರೆಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ.

ಯಾವುದೇ ವಿಷಯದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ, ಲಂಕೇಶ್ ಪತ್ರಿಕೆಯ ಛಾಪನ್ನು ಇಂದಿಗೂ ಯುವ ಸಮುದಾಯಕ್ಕೆ ಪರಿಚಯಿಸುತ್ತಿರುವ ಸಾಲಿನಲ್ಲಿ ಇವರೂ ಒಬ್ಬರು. ಸಾಮಾಜಿಕ ನ್ಯಾಯದ ಪರ ಧೃಡವಾಗಿ ನಿಂತಿರುವ, ಮಾತನಾಡುವ ತಳ ಸಮುದಾಯಗಳ ಮುನ್ನೆಲೆಗಾಗಿ ಶ್ರಮಪಟ್ಟ ಧೀಮಂತ ನಾಯಕ ಅಷ್ಟೇ ಅಲ್ಲ, ಅಲೆಮಾರಿಗಳ ಪರವಾದ ಚಳವಳಿಗಾರರೂ ಆಗಿದ್ದಾರೆ. ಸವಲತ್ತು ಒದಗಿಸಲು ಅಧಿಕಾರಿಗಳ ಮೊರೆ ಹೋಗಲು ಅನಿವಾರ್ಯ ಎಂದರಿತು “ಕರ್ನಾಟಕ ರಾಜ್ಯ ಅಲೆಮಾರಿ, ಬುಡಕಟ್ಟು ಮಹಾಸಭಾ” ಸ್ಥಾಪಿಸಿ ಅದರ ಮೂಲಕ ಇಡೀ ರಾಜ್ಯಾದ್ಯಾಂತ ರಚನಾತ್ಮಕವಾಗಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅತ್ಯಂತ ಕಟ್ಟಕಡೆಯ ಸಮುದಾಯಗಳ ಪಾಲಿನ ಪೋಷಕರೆಂದು ಇವರನ್ನು ಪ್ರಗತಿಶೀಲ ಚಳವಳಿಕಾರರೂ ಕೂಡಾ ಬಣ್ಣಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಎಸ್‌ಯುಸಿಐ ಆಗ್ರಹ

ಈ ರಾಜ್ಯದಲ್ಲಿ ಧ್ವನಿಯೇ ಇಲ್ಲದ ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಶೋಷಿತ ವರ್ಗದ ಪರವಾಗಿ ದೊಡ್ಡ ಪ್ರಮಾಣದ ಧ್ವನಿಯಾಗಿ ನಿಲ್ಲುತ್ತಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಇಂತಹ ಮಹನೀಯರಿಗೆ ಸೂಕ್ತ ಸ್ಥಾನಮಾನ ನೀಡಿ ಗೌರವಿಸುವುದು, ಪ್ರಾತಿನಿಧ್ಯ ಒದಗಿಸುವುದು ಅನಿವಾರ್ಯ. ಹಾಗಾಗಿ ಸಿ ಎಸ್ ದ್ವಾರಕನಾಥ್ ಅವರಿಗೆ ಪಕ್ಷದಲ್ಲಿ ವಿಶೇಷ, ಉನ್ನತವಾದ ವಿಧಾನ ಪರಿಷತ್(ಎಂಎಲ್‌ಸಿ) ಸದಸ್ಯರನ್ನಾಗಿ ಮಾಡಬೇಕೆಂದು ಈ ಮೂಲಕ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಲ್ಲಿ ಪ್ರಜ್ಞಾವಂತ, ಪ್ರಗತಿಶೀಲ ಅಲೆಮಾರಿ ಯುವಕನಾಗಿ ಮನವಿ ಮಾಡುವುದು ನನ್ನ ಕರ್ತವ್ಯ ಎಂದು ಶಿವರಾಜ್ ಮೋತಿ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ₹10 ಕೋಟಿಗೂ ಅಧಿಕ ಅವ್ಯವಹಾರ ಆರೋಪ; ಕಿರಿಯ ಅಭಿಯಂತರ ಅಮಾನತು

ಸಿಂಧನೂರು ಉಪವಿಭಾಗದ ಕಿರಿಯ ಅಭಿಯಂತರ ನಾಗರಾಜ ಪ್ರಭಾ ಅವರನ್ನು ₹10 ಕೋಟಿಗೂ...

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ: ಪರಿಶೀಲನೆಗೆ ಸಮಿತಿ ರಚನೆ

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಅಥವಾ ಶಾಶ್ವತ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲನೆ...

ಕಲಬುರಗಿ | ಕನ್ನಡ ಅಧ್ಯಾಪಕರು ಸಂಘಟಿತರಾಗಿ ಭಾಷೆಯ ಉಳಿವಿಗೆ ಶ್ರಮಿಸಬೇಕು: ಪ್ರೊ. ಶಶಿಕಾಂತ ಉಡಿಕೇರಿ

ಕನ್ನಡ ಭಾಷೆಯ ಪೋಷಣೆ, ಉಳಿವು ಹಾಗೂ ಬೆಳವಣಿಗೆಗೆ ಕನ್ನಡ ಅಧ್ಯಾಪಕರು ಸಂಘಟಿತರಾಗಿ...

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...