ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ಎ ಬಿ ಬಸವರಾಜು ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬಸವರಾಜು ಅವರು ಈ ಹಿಂದೆ ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಎನ್ ಶಿವಶಂಕರ ಅವರನ್ನು ಜನವರಿ 28ರಂದು ವರ್ಗಾವಣೆ ಮಾಡಿ ಬೆಸ್ಕಾಂ ಎಂಡಿಯಾಗಿ ನೇಮಿಸಲಾಗಿತ್ತು. ಬಳಿಕ ಈ ಸ್ಥಾನಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕೆ ಎನ್ ಅನುರಾಧ ಅವರನ್ನು ಪ್ರಭಾರ ಜಿಲ್ಲಾಧಿಕಾರಿಯಾಗಿ ಉಸ್ತುವಾರಿ ನೀಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಡುಗಡೆಯಾದರೂ 2 ವರ್ಷ ಜೈಲಿನಲ್ಲೇ ಇದ್ದ ಕೈದಿ; ಕಾರಣವಿದು!
ಇದೀಗ ನೂತನ ಜಿಲ್ಲಾಧಿಕಾರಿಯಾಗಿ ಬಸವರಾಜು ಎ ಬಿ ಅವರನ್ನು ನೇಮಿಸಿದ್ದು, ಹೆಚ್ಚುವರಿ ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ಜಿಲ್ಲಾ ಪಂಚಾಯತ್ ಸಿಇಒ ಕೆ ಎನ್ ಅನುರಾಧ ಅವರನ್ನು ಆ ಸ್ಥಳದಿಂದ ಬಿಡುಗಡೆಗೊಳಿಸಿದೆ.