ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಅಡಿಗೆ ಕೋಣೆಯಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್‌ಗಳಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದ, ಅದೃಷ್ಟವಶಾತ್ 150 ಮಕ್ಕಳು ಅಪಾಯದಿಂದ ಪಾರಾಗಿರುವ ಘಟನೆ ಗಂಗಾವತಿಯ ಕಾರಟಗಿಯ ರಾಮನಗರ ಬಳಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನ ಊಟ ತಯಾರಿಸುವ ಮುಂದಾದ ವೇಳೆ ಒಂದು ಸಿಲಿಂಡರ್‌ಗೆ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಸಿಲಿಂಡರ್‌ಗೂ ಬೆಂಕಿ ವ್ಯಾಪಿಸಿದೆ. ಅಡುಗೆ ಕೋಣೆಯಲ್ಲಿದ್ದ ಸಾಕಷ್ಟು ಆಹಾರ ಧಾನ್ಯಗಳು ಸುಟ್ಟು ಕರಕಲಾಗಿವೆ. ಶಿಕ್ಷಕರು ಶಾಲೆಯಲ್ಲಿದ್ದ ಸುಮಾರು 150ಕ್ಕೂ ಹೆಚ್ಚು ಮಕ್ಕಳನ್ನು ಹೊರ ಕರೆತಂದು ಸುರಕ್ಷಿತ ಪ್ರದೇಶಕ್ಕೆ ಕಳಿಸಿದ್ದಾರೆ. ಬಳಿಕ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಬೆಂಕಿ ನಿಯಂತ್ರಕ್ಕೆ ಬಾರದ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಸುದ್ದಿ ಓದಿದ್ದೀರಾ?: ಗಂಗಾವತಿ | ಕಸಾಪ ತಾಲೂಕು ಘಟಕದ ನೂತನ ಅಧ್ಯಕ್ಷ-ಪದಾಧಿಕಾರಿಗಳ ಪದಗ್ರಹಣ
ರೆಗ್ಯುಲೇಟರ್ ದೋಷದಿಂದ ಎರಡು ಸಿಲಿಂಡರ್ಗಳು ಬೆಂಕಿಗೆ ಆಹುತಿಯಾಗಿದ್ದು, ಮಿಕ್ಕ ಮೂರು ಸಿಲಿಂಡರ್ಗಳು ಬೆಂಕಿ ತಗುಲಿ ಸುಟ್ಟಿವೆ. ಡ್ಯಾಮೇಜ್ ಆಗಿರುವ ಸಿಲಿಂಡರ್ ಬಳಸಿದರೆ ಮತ್ತೆ ಅಪಾಯ ಸಂಭವಿಸಬಹುದು ಎಂಬ ಕಾರಣಕ್ಕೆ ಜನವಸತಿರಹಿತ ಪ್ರದೇಶಕ್ಕೆ ಒಯ್ದು ಅನಿಲ ಹೊರಕ್ಕೆ ಬಿಡಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

