ಮೊದಲ ಮದುವೆ ಮುಂದುವರೆದಿದ್ದರೂ, ಮಹಿಳೆ 2ನೇ ಪತಿಯಿಂದ ಜೀವನಾಂಶ ಪಡೆಯಬಹುದು: ಸುಪ್ರೀಂ ಕೋರ್ಟ್‌

Date:

ಮಹಿಳೆಯು ತನ್ನ ಮೊದಲ ಮದುವೆಯನ್ನು ಕಾನೂನುಬದ್ಧವಾಗಿ ಮುರಿದುಕೊಳ್ಳದೆ ಇದ್ದರೂ ಸಹ, ಎರಡನೇ ಗಂಡನಿಂದ ಜೀವನಾಂಶ ಪಡೆಯಬಹುದು. ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 125ರ ಅಡಿಯಲ್ಲಿ ಮಹಿಳೆಗೆ ಜೀವನಾಂಶ ನೀಡುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

- Advertisement -

ಸಿಆರ್‌ಪಿಸಿ 125ರ ಅಡಿಯಲ್ಲಿ ಜೀವನಾಂಶದ ಹಕ್ಕು ಪತ್ನಿ ಪಡೆಯುವ ಪ್ರಯೋಜನವಲ್ಲ. ಬದಲಾಗಿ, ಪತಿ ನಿರ್ವಹಿಸಬೇಕಾದ ಕಾನೂನಾತ್ಮಕ ಮತ್ತು ನೈತಿಕ ಕರ್ತವ್ಯವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು” ಎಂದು ನ್ಯಾಯಮೂರ್ತಿ ಬಿ.ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

ಮಹಿಳೆಯೊಬ್ಬರು ತಮ್ಮ ಮೊದಲ ವಿವಾಹ ಸಂಬಂಧವನ್ನು ಕಾನೂನಾತ್ಮಕವಾಗಿ ಮುರಿದುಕೊಳ್ಳದೆ (ವಿಚ್ಛೇದನ ಪಡೆಯದೆ) 2ನೇ ಮದುವೆಯಾಗಿದ್ದರು. ಆ ಬಳಿಕ, 2ನೇ ವೈವಾಹಿಕ ಸಂಬಂಧವೂ ಮುರಿದುಬಿದ್ದಿತ್ತು. ತಮಗೆ 2ನೇ ಪತಿ ಜೀವನಾಂಶ ನೀಡಬೇಕೆಂದು ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣಾ ನ್ಯಾಯಾಲಯವು ಮಾಸಿಕ 5,000 ರೂ. ಜೀವನಾಂಶ ನೀಡುವಂತೆ 2ನೇ ಪತಿಗೆ ಆದೇಶ ನೀಡಿತ್ತು.

ಆದರೆ, ಆ ತೀರ್ಪನ್ನು ಪ್ರಶ್ನಿಸಿ ಮಹಿಳೆಯ 2ನೇ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ‘ಆಕೆ ಮೊದಲ ಮದುವೆಯನ್ನು ಕಾನೂನು ತೀರ್ಪಿನ ಮೂಲಕ (ವಿಚ್ಛೇದನ) ಮುರಿದುಕೊಂಡಿಲ್ಲ. ಹೀಗಾಗಿ, ಮಹಿಳೆಯನ್ನು ಅರ್ಜಿದಾರನ ಕಾನೂನುಬದ್ದ ಪತ್ನಿ ಎಂದು ಪರಿಗಣಿಸಲು ಆಗುವುದಿಲ್ಲ’ ಎಂದು ಹೇಳಿತ್ತು. ಮಾತ್ರವಲ್ಲದೆ, ಜೀವನಾಂಶ ನೀಡುವುದನ್ನು ರದ್ದುಗೊಳಿಸಿತ್ತು.

ಹೈಕೋರ್ಟ್‌ ತೀರ್ಪಿನ ವಿರುದ್ಧ ಮಹಿಳೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಮೇಲ್ಮನವಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್‌, “ಮಹಿಳೆ ಕಾನೂನುಬದ್ಧವಾಗಿ ಮೊದಲ ಪತಿಯಿಂದ ದೂರವಾಗದೇ ಇದ್ದರೂ, ಆಕೆ 2ನೇ ಪತಿಯಿಂದ ಜೀವನಾಂಶ ಪಡೆಯಬಹುದು” ಎಂದು ಹೇಳಿದೆ.

ಈ ವರದಿ ಓದಿದ್ದೀರಾ?: ಮುಟ್ಟಿನ ಸಮಯದಲ್ಲಿ ಹತ್ತಾರು ಕಟ್ಟುಪಾಡುಗಳು; ಗಂಡನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ

“ಸಿಆರ್‌ಪಿಸಿ 125ರ ಅಡಿಯಲ್ಲಿ ಜೀವನಾಂಶ ಎಂಬುದು ಸಾಮಾಜಿಕ ನ್ಯಾಯದ ಉದ್ದೇಶವನ್ನು ಹೊಂದಿದೆ. ನಾವು ಆತ್ಮಸಾಕ್ಷಿಯಿಂದ ಗಮನಿಸಿದಾಗ ಮೇಲ್ಮನವಿದಾರರಿಗೆ (ಮಹಿಳೆ) ಜೀವನಾಂಶವನ್ನು ನಿರಾಕರಿಸಲು ಸಾಧ್ಯವಿಲ್ಲ. ಸಾಮಾಜಿಕ ಕಲ್ಯಾಣ ನಿಬಂಧನೆಗಳನ್ನು ವಿಸ್ತಾರವಾದ ಮತ್ತು ಫಲಕಾರಿ ಉದ್ದೇಶಕ್ಕಾಗಿ ಒಳಪಡಿಸಬೇಕು ಎಂಬುದು ಕಾನೂನಿನ ಆಶಯವಾಗಿದೆ” ಎಂದು ಪೀಠ ಹೇಳಿದೆ.

“ಮಹಿಳೆಯ ಮೊದಲ ವಿವಾಹ ಸಂಬಂಧವನ್ನು ಕಾನೂನುಬದ್ಧವಾಗಿ ಮುರಿದುಕೊಂಡಿಲ್ಲ ಎಂಬ ಕಾರಣಕ್ಕೆ ಪ್ರತಿವಾದಿಯು ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಅದಕ್ಕೆ ಅವಕಾಶ ಕೊಡಬಾರದು. ಅಲ್ಲದೆ, ಮಹಿಳೆಯು ಮೊದಲನೇ ಪತಿಯಿಂದ ಜೀವನಾಂಶ ಪಡೆಯುತ್ತಿಲ್ಲ ಎಂಬುದನ್ನು ಗಮನಿಸಬೇಕು” ಎಂದು ಪೀಠ ಹೇಳಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದಲ್ಲಿ ಮೈಸೂರು ಮೂಲದ ಪಿಟೀಲು ವಾದಕ ಭಾಸ್ಕರ್ ಅರೆಸ್ಟ್; ಅಪ್ರಾಪ್ತರ ಮೇಲೆ ದೌರ್ಜನ್ಯ ಆರೋಪ

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಪ್ರಮುಖ ಪಿಟೀಲು ವಾದಕ, ಮೈಸೂರು ಮೂಲದ...

₹13 ಲಕ್ಷದ ಬ್ರೆಜಾ ಕಾರು ನೀಡದ್ದಕ್ಕೆ ಮದುವೆ ರದ್ದು: ದೆಹಲಿ ಪೊಲೀಸ್ ಅಮಾನತು

ತಾನು ಬೇಡಿಕೆಯಿಟ್ಟ ₹13 ಲಕ್ಷ ಮೌಲ್ಯದ ಮಾರುತಿ ಬ್ರೆಜಾ ಕಾರಿನ ಬದಲು...

ಬಾಂಗ್ಲಾದೇಶಕ್ಕೆ ಮರಳಲು ಶೇಖ್ ಹಸೀನಾ ನಿರ್ಧಾರ: ಬಾಂಗ್ಲಾ ಸರ್ಕಾರದೊಂದಿಗೆ ಸಂಘರ್ಷದ ಮುನ್ಸೂಚನೆ!

ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ...

ಆಜ಼ಂ ಖಾನ್ ವಿರುದ್ಧ 20 ವರ್ಷ ಹಳೆಯ ಕೇಸು ತೆರೆದ ಯೂಪಿ ಪೊಲೀಸರು

ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆಜಂ...