ಗುಬ್ಬಿ | ಅದ್ದೂರಿಯಾಗಿ ಜರುಗಿದ ಲಕ್ಕೇನಹಳ್ಳಿ ಸೂರ್ಯ ಮಂಡಲ ರಥೋತ್ಸವ.

Date:

Advertisements

ರಥ ಸಪ್ತಮಿ ಹಿನ್ನಲೆ ಲಕ್ಕೇನಹಳ್ಳಿ ಶ್ರೀ ತುಳಸಿ ರಂಗನಾಥ ಸ್ವಾಮಿಯ ಸೂರ್ಯ ಮಂಡಲ ರಥೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.

ಬೆಳಿಗ್ಗೆ ಸುಪ್ರಭಾತ ಸೇವೆಯಿಂದ ಆರಂಭವಾಗಿ ರುದ್ರಾಭಿಷೇಕ ನಡೆದು ಮಧ್ಯಾಹ್ನ 1.30 ಕ್ಕೆ ಸಂಪ್ರದಾಯದಂತೆ ಸೂರ್ಯ ಮಂಡಲ ರಥೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವ ವಿಧಿವತ್ತಾಗಿ ನಡೆಸಲಾಯಿತು.

ತಾಲ್ಲೂಕಿನಲ್ಲಿ ವರ್ಷದ ಪ್ರಥಮ ಜಾತ್ರೆ ಎನಿಸಿಕೊಂಡ ಲಕ್ಕೇನಹಳ್ಳಿ ಜಾತ್ರೆ ವಿಶೇಷ ಸೂರ್ಯ ಪಥ ಬದಲಾಯಿಸುವ ರಥಸಪ್ತಮಿ ದಿನದಂದು ರಂಗನಾಥಸ್ವಾಮಿ ಸೂರ್ಯನ ತೇರು ಅದ್ದೂರಿಯಾಗಿ ನಡೆಸಲಾಗುತ್ತದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರಿಗೆ ಇಲ್ಲಿನ ದಾಸೋಹ ಸಮಿತಿ ಅನ್ನ ಸಂತರ್ಪಣೆ ಆಯೋಜಿಸಿದ್ದರು. ಬಿಸಿಲಿನ ಝಳಕ್ಕೆ ಪಾನಕ ಫಲಾಹಾರ ಸೇನೆಯನ್ನು ಭಕ್ತರು ಆಯೋಜಿಸಿದ್ದರು.

Advertisements

ಮೂರು ದಿನಗಳ ಜಾತ್ರೆಯಲ್ಲಿ ಮಂಗಳವಾರ ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ದವನ ಬಾಳೆಹಣ್ಣು ಎಸೆದು ಭಕ್ತರು ತಮ್ಮ ಹರಕೆ ಕಟ್ಟುವುದು ನಡೆಸುತ್ತಾರೆ.

ಸಂಜೆ ಸ್ವಾಮಿಯವರಿಗೆ ಕರ್ಪೂರ ಸೇವೆ, ವಿಧ್ಯುದ್ದೀಪ ಅಲಂಕಾರದ ಬೆಳ್ಳಿ ಪಲ್ಲಕ್ಕಿ ಉತ್ಸವ ಕಲಾ ಮೇಳ ಮದ್ದು ಬಾಣ ಬಿರುಸು ಜೊತೆಗೆ ಅದ್ದೂರಿ ಮೆರವಣಿಗೆ ಮೂಲಕ ಸ್ವಾಮಿಯನ್ನು ಮೂಲಸ್ಥಾನಕ್ಕೆ ಕರೆತರಲಾಗುವುದು ಎಂದು ದಾಸೋಹ ಸಮಿತಿ ಅಧ್ಯಕ್ಷ ಶಿವರಾಮಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಕನ್ವೀನರ್ ಷಡಕ್ಷರಿ, ಪಣಗಾರ್ ಪಂಚಣ್ಣ, ಸಮಿತಿಯ ಖಜಾಂಚಿ ಕೆಂಪೇಗೌಡ, ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಂಡುರಂಗಯ್ಯ, ಸದಸ್ಯ ಕೃಷ್ಣಮೂರ್ತಿ, ಗಂಗಾಧರ್. ಮಂಜುನಾಥ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X