ಚಲಿಸುತ್ತಿದ್ದ ರೈಲಿನಲ್ಲಿ ಕಾಮುಕರ ಗುಂಪು ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿದ್ದು, ರೈಲು ಚಲಿಸುತ್ತಿರುವಾಗಲೇ ರೈಲಿನಿಂದ ಹೊರದಬ್ಬಿರುವ ಆಘಾತಕಾರಿ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕೆವಿ ಕುಪ್ಪಂ ಬಳಿ ಘಟನೆ ನಡೆದಿದೆ.
ತಿರುಪ್ಪೂರು ಜಿಲ್ಲೆಯ ಅವಿನಾಶಿಯ ಮಹಿಳೆ ಕೊಯಮತ್ತೂರು-ಚಿತ್ತೂರು ಇಂಟರ್‌ಸಿಟಿ ರೈಲಿನಲ್ಲಿ ತಿರುಪತಿಗೆ ತೆರಳುತ್ತಿದ್ದರು. ಅವರು, ಮಹಿಳಾ ಬೋಗಿಯಲ್ಲಿ ಗರ್ಭಿಣಿ ಪ್ರಯಾಣಿಸುತ್ತಿದ್ದರು. ಅಲ್ಲಿಗೆ ಬಂದು ವಿಕೃತ ಕಾಮುಕರ ಗುಂಪು ಆಕೆಗೆ ಲೈಂಗಿಕ ಕಿರುಕುಳ ನೀಡಿದೆ. ಅಲ್ಲದೆ, ಆಕೆಯನ್ನು ರೈಲು ಚಲಿಸುತ್ತಿರುವಾಗಲೇ, ಹೊರಗೆ ನೂಕಿದೆ.
ಮಹಿಳೆ ಕೊಯಮತ್ತೂರಿನಲ್ಲಿ ರೈಲು ಹತ್ತಿದ್ದಳು, ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗಾಗಿ ಗೊತ್ತುಪಡಿಸಿದ್ದ ಮಹಿಳಾ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದಳು. ಆದರೆ, ಜೋಲಾರ್ಪೇಟೆಯಲ್ಲಿ ಆ ವಿಭಾಗದಲ್ಲಿ ಹತ್ತಿದ ಪುರುಷರ ಗುಂಪೊಂದು ಗರ್ಭಿಣಿಗೆ ತೊಂದರೆ ಕೊಟ್ಟಿದೆ. ಆಕೆ ಅವರ ಬಳಿ ಹೊರ ಹೋಗುವಂತೆ ಕೇಳಿಕೊಂಡರೂ ಕೂಡ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ರೈಲಿನಿಂದ ಕೆಳಗೆಬಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಆಕೆಯ ಕೈ ಮತ್ತು ಕಾಲುಗಳ ಮೂಳೆ ಮುರಿದಿವೆ. ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ವೆಲ್ಲೂರು ಆಸ್ಪತ್ರೆಯಲ್ಲಿ ಗರ್ಭಿಣಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ವೆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮಹಿಳೆ ವಿವರಿಸಿದ ಗುರುತುಗಳ ಆಧಾರದ ಮೇಲೆ ಕೆ.ವಿ ಕುಪ್ಪಂ ಪ್ರದೇಶದ ಹೇಮರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.