ಪಶುಪಾಲಕ ಕರ್ನಾಟಕ ಸೆಂಟರ್ ಫಾರ್ ಪ್ರಾಸ್ಟೋರಲಿಸಂ ಸಹಜೀವನ್ ಅವರಿಂದ ಬೆಂಗಳೂರಿನ ಮಲ್ಲತ್ತಹಳ್ಳಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದಲ್ಲಿ ಫೆಬ್ರವರಿ 8ರಂದು ಪಶುಪಾಲಕ ಸಮುದಾಯಗಳ ಕಥನಗಳು: ಮುಂದಿನ ನಡೆಗಳು ವಿಷಯದ ಕುರಿತು ದುಂಡುಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10ಕ್ಕೆ ಅಲೆಮಾರಿ ಪಾಲಕರ ʼವಿಲಿಂಗ್ ಲೈಟ್ಲಿ” ಉತ್ಸವದ ಕಾಲುದಾರಿಯಲ್ಲಿ ಒಂದು ಪಯಣ ನಡೆಯಲಿದ್ದು, 10-30ಕ್ಕೆ ಡಾ ರಘುಪತಿ ಅವರಿಂದ ಪ್ರಸ್ತಾವನೆ, ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಡಾ ರಹಮತ್ ತರೀಕೆರೆ ಅವರಿಂದ ಉದ್ಘಾಟನಾ ನುಡಿ ಇರುತ್ತದೆ.
11-30ಕ್ಕೆ ಮೊದಲ ಗೋಷ್ಠಿಯಲ್ಲಿ ಪಶುಪಾಲಕ ಸಮುದಾಯಗಳ ಕಥನಗಳು ಕುರಿತು ಕಾರ್ಯಕ್ರಮವಿರುತ್ತದೆ. ಬಳಿಕ ಮಧ್ಯಾಹ್ನ 2-30ಕ್ಕೆ 2ನೇ ಗೋಷ್ಠಿ ನಡೆಯಲಿದ್ದು, ಪಶುಪಾಲಕ ಸಮುದಾಯಗಳ ಮುಂದಿನ ನಡೆಗಳ ವಿಷಯಗಳ ಕುರಿತು ಮಂಡನೆಯಾಗುತ್ತದೆ.
ಪ್ರೊ. ರಾಜಪ್ಪ ದಳವಾಯಿ, ಡಾ ವಡ್ಡಗೆರೆ ನಾಗರಾಜಯ್ಯ, ಡಾ ಪ್ರೇಮಾ ಜಿ ಕೆ, ಡಾ ಮುತ್ತಯ್ಯ, ಡಾ ಲಕ್ಷ್ಮೀಪತಿ ಸಿ ಜಿ, ಡಾ ಗೋವಿಂದ ಸ್ವಾಮಿ, ಡಾ ಚಂದ್ರಪ್ಪ, ರವಿಕುಮಾರ್ ಬಾಗಿ, ಜಯಲಕ್ಷ್ಮೀ ನಾಯಕ, ಡಾ ಕಲಮರಹಳ್ಳಿ ಮಲ್ಲಿಕಾರ್ಜುನ, ಡಾ. ಗೋವಿಂದಸ್ವಾಮಿ ಎಂ ಆರ್, ನಾಸಿರ್ ಹುಸೇನ್, ಡಾ ಭಾಗ್ಯಲಕ್ಷ್ಮಿ, ಹರ್ಷಕುಮಾರ್ ಕುಗ್ವೆ, ರುದ್ರ ಪ್ರಸಾದ್, ಡಾ ನಾರಾಯಣಸ್ವಾಮಿ, ಅಹೋಬಲಪತಿ, ಡಾ ಅಚ್ಯುತ್, ಕೂನಿಕೆರೆ ರಾಮಣ್ಣ ಇವರೆಲ್ಲರೂ ಗೋಷ್ಠಿಯಲ್ಲಿ ವಿಷಯ ಮಂಡಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಸಂಜೆ 4ಕ್ಕೆ ಡಾ ಬಂಜಗೆರೆ ಜಯಪ್ರಕಾಶ್ ಮತ್ತು ಡಾ ನೆಲ್ಲುಕುಂಟೆ ವೆಂಕಟೇಶ್ ಅವರಿಂದ ನಿರ್ಣಯಗಳ ಅಂಗೀಕಾರ ಮತ್ತು ಸಮಾರೋಪ ನುಡಿ ಇರಲಿದೆ. ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಕಾರ್ಯಕ್ರಮದ ಆಯೋಜಕರು ಕೋರಿದ್ದಾರೆ.