ಕಲಬುರಗಿ | ದೇಶದ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕ ಚಳುವಳಿ ಅಗತ್ಯ: ಡಾ.ರಮೇಶ್ ಲಂಡನಕರ್

Date:

Advertisements

“ದೇಶದ ಇಂದಿನ ಸಾಂಸ್ಕೃತಿಕ, ವೈಚಾರಿಕ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕ ಚಳುವಳಿ ಅತ್ಯವಶ್ಯಕ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ರಮೇಶ ಲಂಡನಕರ್ ತಿಳಿಸಿದರು.

ನೇತಾಜಿ ಸುಭಾಷಚಂದ್ರ ಬೋಸ್ ಸ್ಮರಣ ಸಮಿತಿ, ಆವಿಷ್ಕಾರ ವೇದಿಕೆ, ಎಐಡಿಎಸ್‌ಓ, ಎಐಡಿವೈಓ, ಎಐಎಮ್ಎಸ್‌ಎಸ್ ಜಂಟಿಯಾಗಿ ಕಲಬುರಗಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿರುವ “ಸಾಂಸ್ಕೃತಿಕ ಜನೋತ್ಸವ” ಕಾರ್ಯಕ್ರಮದ ಎರಡನೇ ದಿನ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

“ನೇತಾಜಿ ಸುಭಾಶ್ಚಂದ್ರ ಬೋಸ್‌ರವರ ವಿಚಾರಧಾರೆ-ಅವರ ಸಮರಶೀಲ ಹೋರಾಟವು ಅತ್ಯಂತ ಪ್ರಸ್ತುತವಾಗಿದೆ. ಇಂದಿನ ರಾಜಕೀಯ-ಸಾಮಾಜಿಕ-ಆರ್ಥಿಕ ಹಾಗೂ ಸಾಂಸ್ಕೃತಿಕ ಸಮಸ್ಯೆಗಳಿಗೆ ಪರಿಹಾರವನ್ನು ನೇತಾಜಿಯವರ ರಾಜೀರಹಿತ ಹೋರಾಟದಲ್ಲಿ ಕಾಣಬಹುದಾಗಿದೆ” ಎಂದು ಹೇಳಿದರು.

Advertisements

“ಒಂದೆಡೆ ಬ್ರಿಟಿಷರ ಆಳ್ವಿಕೆಯಡಿಯಲ್ಲಿ ದೇಶದ ಜನತೆಯು ಅತ್ಯಂತ ಶೋಷಣೆಗೊಳಗಾಗಿದ್ದರು. ಇನ್ನೊಂದೆಡೆ ಕಂದಾಚಾರ, ಮೌಢ್ಯತೆ ಹಾಗೂ ಜಡತ್ವ ತುಂಬಿತ್ತು. ಇಂತಹ ಸಂದರ್ಭದಲ್ಲಿ ನೇತಾಜಿಯವರು ಕಟ್ಟಿದಂತಹ ಸಮರಶೀಲ ಹೋರಾಟವು ಸ್ವಾತಂತ್ರ್ಯ ಸಂಗ್ರಾಮದ ದಿಕ್ಕನ್ನೇ ಬದಲಾಯಿಸಿ, ಜನರಲ್ಲಿ ಹೊಸ ಹುಮ್ಮಸ್ಸು ಕನಸು ನೀಡಿತು. ನೇತಾಜಿಯವರ ಸ್ವತಂತ್ರ ಭಾರತವು ಬಡತನಮುಕ್ತ, ಮಾನವನಿಂದ ಮಾನವನ ಶೋಷಣಾಮುಕ್ತ ಸಮಸಮಾಜ ನಿರ್ಮಾಣದ ಕನಸಿತ್ತು. ಆದರೆ ಅವರ ಕನಸು ಕನಸಾಗಿಯೇ ಉಳಿದಿದ್ದು, ಈಗ ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ಹೇಳಿದರು.

“ಇಂದಿನ ಶಿಕ್ಷಣವು ವೈಜ್ಞಾನಿಕ ಹಾಗೂ ಧರ್ಮ ನಿರಪೇಕ್ಷವಾಗಿಲ್ಲದಿರುವುದರಿಂದ ಇಂದಿನ ಯುವಪೀಳಿಗೆ ಯಾವುದೇ ಆದರ್ಶ-ತಾತ್ವಿಕತೆ ಇಲ್ಲದೇ ಸೊರಗುತ್ತಿದೆ. ಸಮಾಜದಲ್ಲಿ ನೀತಿ, ನೈತಿಕತೆ ಹಾಗೂ ಸಾಂಸ್ಕೃತಿಕ ಅಧಃಪತನದಿಂದಾಗಿ ವಿದ್ಯಾರ್ಥಿ-ಯುವ ಸಮೂಹವು ಕವಲು ಸ್ಥಿತಿಯಲ್ಲಿದೆ. ಹಾಗಾಗಿ, ಇಂದು ಸಮಾಜವನ್ನು ಅಮೂಲಾಗ್ರವಾಗಿ ಬದಲಾಯಿಸಬೇಕೆಂದರೆ ಜನರ ಮನೋಭೂಮಿಕೆಯನ್ನು ಹದಗೊಳಿಸುವುದಕ್ಕಾಗಿ ಸಾಂಸ್ಕೃತಿಕ ಚಳುವಳಿ ಅತ್ಯವಶ್ಯಕ. ಹಾಗಾಗಿಕಲಬುರಗಿ ಜನತೆಯು ಸೇರಿಕೊಂಡು ಪ್ರತಿ ವರ್ಷ ನಡೆಸುತ್ತಿರುವ ಸಾಂಸ್ಕೃತಿಕ ಜನೋತ್ಸವ ಬಹುಮುಖ್ಯವಾದುದು” ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಎಐಎಮ್ಎಸ್ಎಸ್ ಜಿಲ್ಲಾ ಕಾರ್ಯದರ್ಶಿಗಳಾದ ಡಾ. ಸೀಮಾ ದೇಶಪಾಂಡೆ ಮಾತನಾಡಿ, “ನೇತಾಜಿರವರು ಲಿಂಗಭೇದ ಮಾಡದೇ ಸಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಕೈಗೆ ಬಂದೂಕು ನೀಡಿ, ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಸಿದ್ದು ಕ್ರಾಂತಿಕಾರಿ ನಡೆಯೆಂದು ಹೇಳುತ್ತಾ, ನೇತಾಜಿಯವರ ಕನಸಿನ ಭಾರತವನ್ನು ನಿರ್ಮಾಣ ಮಾಡುವುದರಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾದದು” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಕಲಬುರಗಿ | ತ್ಯಾಗ-ಸ್ಫೂರ್ತಿಯ ಸಂಕೇತ ರಮಾಬಾಯಿ ಅಂಬೇಡ್ಕ‌ರ್: ಮಿಲಿಂದ್ ಸಾಗರ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ತುಳಜಾರಾಮ ರವರು ವಹಿಸಿಕೊಂಡಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಡೊಳ್ಳಿನ ಪದಗಳು, ಕೊಳಲು ವಾದನ, ನೃತ್ಯ, ಕಾವ್ಯ-ಕುಂಚ-ನೃತ್ಯ, ಖವ್ವಾಲಿ, ಹಾಗೂ ಪ್ರೇತಾತ್ಮಗಳು ನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

Download Eedina App Android / iOS

X