ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಅನಾರೋಗ್ಯ ಕಾರಣದಿಂದಾಗಿ ಚೀನಾದಲ್ಲಿ ನಡೆಯಲಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ. ಅವರ ನಿರ್ಧಾರವು ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಚಿನ್ನ ಗೆಲ್ಲುವ ಸಾಧ್ಯತೆಗಳಿವೆ ದೊಡ್ಡ ಹೊಡೆತ ನೀಡಿದೆ ಎನ್ನಲಾಗಿದೆ.
ಚೀನಾದ ಕ್ವಿಂಗ್‌ಡಾವೊದಲ್ಲಿ ಫೆಬ್ರವರಿ 11-16 ರವರೆಗೆ ಪಂದ್ಯಾವಳಿ ನಡೆಯಲಿದೆ. ಭಾರತೀಯ ಬ್ಯಾಡ್ಮಿಂಟನ್‌ಗಳು ಗುವಾಹಟಿಯಲ್ಲಿ ತರಬೇತಿ ನಡೆಯುತ್ತಿದ್ದಾರೆ. ಬ್ಯಾಡ್ಮಿಂಟನ್ ಮಿಶ್ರ (ಮಹಿಳೆ-ಪುರುಷ) ತಂಡದಲ್ಲಿ ಪಿ.ವಿ ಸಿಂಧು, ಲಕ್ಷ್ಯ ಸೇನ್, ಎಚ್.ಎಸ್ ಪ್ರಣಯ್ ಹಾಗೂ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇದ್ದಾರೆ.
ಆದರೆ, ಪಿ.ವಿ ಸಿಂಧು ಅವರು ಮಂಡಿ ನೋವಿಗೆ ತುತ್ತಾಗಿದ್ದು, ಚೀನಾದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸಲಾರೆ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸಿಂಧು, “ಬೇಸರದ ಮನಸ್ಸಿನಿಂದ ಈ ಪೋಸ್ಟ್ ಬರೆಯುತ್ತಿದ್ದೇನೆ. ನಾನು ಚಾಂಪಿಯನ್ಸ್‌ಶಿಪ್ ಟ್ರೋಫಿಗಾಗಿ ತೆರೆಳುತ್ತಿರುವ ತಂಡದ ಭಾಗವಾಗಿರುವುದಿಲ್ಲ. ಫೆಬ್ರವರಿ 4ರಂದು ಗುವಾಹಟಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ, ನನಗೆ ಮಂಡಿ ನೋವು ಕಾಣಿಸಿಕೊಂಡಿದೆ. ನೋವಿನಿಂದ ಸುಧಾರಿಸಿಕೊಳ್ಳಲು ಪ್ರಯತ್ನಿಸಿದರೂ, ನಿರೀಕ್ಷೆಯಂತೆ ಚೇತರಿಕೆಯಾಗಿಲ್ಲ. ಚೇತರಿಕೆಗೆ ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ” ಎಂದು ಹೇಳಿದ್ದಾರೆ.
Hi everyone,
— Pvsindhu (@Pvsindhu1) February 9, 2025
It is with a heavy heart that I share I won’t be traveling with the team for BAMTC 2025. While training on the 4th in Guwahati, I felt a twinge in my hamstring. Despite my efforts to push through with heavy taping for our country, an MRI has revealed that my…
2022ರಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಿಂಧು ಚಿನ್ನದ ಪದಕ ಗೆದ್ದಿದ್ದರು. ನಂತರ, ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡದ ಭಾಗವಾಗಿದ್ದರು.