ಸಹೋದರಿಯ ಮದುವೆ ಸಮಾರಂಭದ ವೇಳೆ ವೇದಿಕೆಯಲ್ಲಿ ಡಾನ್ಸ್ ಮಾಡುತ್ತಿದ್ದ ಯುವತಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಸಂಭವಿಸಿದೆ.
ಮೃತ ಯುವತಿ ಇಂದೋರ್ ಮೂಲದ ಪರಿಣಿತಿ (23). ಯುವತಿಯ ಕೊನೆಯ ಕ್ಷಣದ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಬೆಚ್ಚಿಬೀಳಿಸುವಂತಿದೆ.
ಘಟನೆ ಶನಿವಾರ(ಫೆ.8) ರಂದು ಸಂಭವಿಸಿದ್ದು, ಪರಿಣಿತಿ ತನ್ನ ಸಹೋದರಿಯ ಮದುವೆಯ ಸಂಭ್ರಮದಲ್ಲಿದ್ದಳು. ಶನಿವಾರ ರಾತ್ರಿ ಸುಮಾರು ಒಂಬತ್ತು ಗಂಟೆಯ ಮದುವೆಯ ಅರಿಶಿನ ಶಾಸ್ತ್ರ ನಡೆಯುತ್ತಿತ್ತು. ಈ ಹೊತ್ತಿನ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮದಲ್ಲಿ ಖುಷಿಯಿಂದ ಡಾನ್ಸ್ ಮಾಡಲು ಪರಿಣಿತಿ ವೇದಿಕೆಗೆ ತೆರಳಿದ್ದಾಳೆ.
MP : विदिशा में बहन की शादी में स्टेज पर डांस करते वक्त युवती की अचानक मौत हो गई !! pic.twitter.com/dcjKgsdxej
— Sachin Gupta (@SachinGuptaUP) February 9, 2025
ನೃತ್ಯ ಮಾಡುತ್ತಲೇ ಯುವತಿ ಹೃದಯಾಘಾತಕ್ಕೆ ಒಳಗಾಗಿ ವೇದಿಕೆಯಲ್ಲೇ ಕುಸಿದುಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಕುಟುಂಬದ ಸದಸ್ಯರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪರಿಶೀಲಿಸಿದ ವೈದ್ಯರು ಯುವತಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವುದಾಗಿ ಘೋಷಣೆ ಮಾಡಿರುವುದಾಗಿ ವರದಿಯಾಗಿದೆ.
ಇದನ್ನು ಓದಿದ್ದೀರಾ? ರಾಜಾರಾಂ ತಲ್ಲೂರು ಪತ್ರಕ್ಕೆ ಸಿಎಂ ಸ್ಪಂದನೆ; ಹಠಾತ್ ಸಾವುಗಳ ಅಧ್ಯಯನಕ್ಕೆ ತಜ್ಞರು- ವಿಜ್ಞಾನಿಗಳ ಸಮಿತಿ ರಚನೆ
ಹಠಾತ್ ಸಾವುಗಳ ಅಧ್ಯಯನಕ್ಕೆ ತಜ್ಞರು- ವಿಜ್ಞಾನಿಗಳ ಸಮಿತಿ ರಚನೆಗೆ ಮುಂದಾಗಿರುವ ಕರ್ನಾಟಕ
ಹಠಾತ್ ಸಾವುಗಳ ಕುರಿತಂತೆ ಮತ್ತು ಮುಂದೆ ಈ ರೀತಿಯ ಸಾವುಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮರ್ಪಕ ಸಂಶೋಧನೆ ನಡೆಸಲು ತಜ್ಞರ ಹಾಗೂ ವಿಜ್ಞಾನಿಗಳ ಸಮಿತಿ ರಚಿಸುವಂತೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಇತ್ತೀಚಿಗೆ ಮುಖ್ಯಮಂತ್ರಿಗಳಿಗೆ ಇ-ಮೇಲ್ ಮೂಲಕ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಈ ರೀತಿಯ ಸಾವುಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮರ್ಪಕ ಸಂಶೋಧನೆ ನಡೆಸಲು ತಜ್ಞರ ಹಾಗೂ ವಿಜ್ಞಾನಿಗಳ ಸಮಿತಿ ರಚಿಸಲಾಗುವುದು” ಎಂದು ಭರವಸೆ ನೀಡಿ, ಪತ್ರದ ಮೂಲಕ ಉತ್ತರಿಸಿದ್ದರು.
