ಬೀದರ್‌ | ಕಾಯಕದಲ್ಲಿ ಕೈಲಾಸ ಕಂಡ ಶರಣರು : ಸುರೇಖಾ ಕೆ.ಎ.ಎಸ್.

Date:

Advertisements

ಸಮಾಜದಲ್ಲಿ ಕಾಯಕ ನಿಷ್ಠೆಯ ಆದರ್ಶವನ್ನು ತಿಳಿಸಿಕೊಟ್ಟವರು ಶರಣರು. ಕಾಯ ಹಾಗೂ ಕಾಯಕದಲ್ಲಿ ಕೈಲಾಸವನ್ನು ಕಂಡು ಬಾಳಿದ ಮಹಾನುಭಾವರು ಬಸವಾದಿ ಶರಣರು ಎಂದು ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ಅವರು ಹೇಳಿದರು.

ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿ, ʼವೃತ್ತಿ ಮನುಷ್ಯನಿಗೆ ಶೋಭೆ, ಗೌರವ ತರುತ್ತದೆ. ಸತ್ಕರ್ಮದ ಕಾಯಕದಿಂದ ವ್ಯಕ್ತಿ ಉದಾತ್ತನಾಗುತ್ತಾನೆ. ಜೀವನದಲ್ಲಿ ಸದಾ ಕಾಯಕ ನಿರತರಾಗಬೇಕೆಂಬುದು ಶರಣರ ಧ್ಯೇಯ ಹಾಗೂ ಆದರ್ಶವಾಗಿತ್ತುʼ ಎಂದರು.

ʼಯಾವ ಕಾಯಕವೂ ದೊಡ್ಡದಲ್ಲ, ಚಿಕ್ಕದಲ್ಲ. ಮನಸ್ಸಿನಿಂದ ಮಾಡುವ ಕಾಯಕವೇ ದೊಡ್ಡದೆಂದು ನಂಬಿದವರು ಶರಣರು. ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಮಾದಾರ ಧೂಳಯ್ಯರವರಂತಹ ಮುಂತಾದ ಮಹಾನ್ ಶರಣರು ತಮ್ಮ ಕಾಯಕದ ಆದರ್ಶದಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದವರು. ಯಾರೂ ದುಡಿಯದೇ ಪ್ರಸಾದ ಸೇವಿಸಬಾರದೆಂಬ ಮೌಲ್ಯವನ್ನು 12ನೇ ಶತಮಾನದಲ್ಲಿಯೇ ಹೇಳಿದಂತಹ ಮಹನೀಯರಾಗಿದ್ದಾರೆʼ ಎಂದು ಹೇಳಿದರು.

Advertisements

ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯ್ಕ್ ಮಾತನಾಡಿ, ʼಶರಣರು ತಾವು ಮಾಡುವ ಕಾಯಕನಿಷ್ಠೆ ಹಾಗೂ ತಮ್ಮ ವಚನಗಳಿಂದಲೇ ಇಂದಿಗೂ ಜೀವಂತವಾಗಿದ್ದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಶರಣರ ಸಮಾನತೆಯ ಸಿದ್ಧಾಂತ ಸಾರ್ವಕಾಲಿಕ ಮೌಲ್ಯವಾಗಿದೆ. ಶರಣರು ಎಲ್ಲರನ್ನೂ ಸಮಾನವಾಗಿ ಕಂಡರು. ಶರಣರು ಆರೋಗ್ಯಕರ ಸಮಾಜಕ್ಕಾಗಿ ಹಂಬಲಿಸಿದರುʼ ಎಂದರು.

ಕನ್ನಡ ಉಪನ್ಯಾಸಕ ರಾಮಚಂದ್ರ ಗಣಾಪೂರ ಮಾತನಾಡಿ, ʼಶರಣರು ಕಾಯಕ ಪರಂಪರೆಗೆ ಮೌಲ್ಯವನ್ನು ತಂದುಕೊಟ್ಟವರು. ಆ ಮೂಲಕ ತಮ್ಮ ನಡೆ-ನುಡಿಯಿಂದ, ಕಾಯಕನಿಷ್ಠೆಯಿಂದ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಮಹತ್ವದ ಕೊಡುಗೆಯನ್ನು ನೀಡಿದರು. ಶರಣರು ಮೊದಲು ನಡೆದರು, ನಂತರ ನುಡಿದರು. ಹೀಗಾಗಿ ನಮಗೆ ನಡೆ-ನುಡಿಯ ಆದರ್ಶಗಳ ಅವಶ್ಯಕತೆಯಿದೆ ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಬಾಲ್ಯದಲ್ಲೇ ಅಸಮಾನತೆ ವಿರುದ್ಧ ಬಂಡಾಯವೆದ್ದ ದಾರ್ಶನಿಕ ಬಸವಣ್ಣ: ಸಭಾಪತಿ ಯು.ಟಿ.ಖಾದರ್

ಸಮಾರಂಭದಲ್ಲಿ ಬೀದರ ವಿಶ್ವವಿದ್ಯಾಲಯದ ಉಪನ್ಯಾಸಕ, ಸಿಬ್ಬಂದಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

Download Eedina App Android / iOS

X