ವಿಮಾನ ಪತನವಾಗಿ 40 ದಿನಗಳ ಬಳಿಕ ದಟ್ಟ ಕಾಡಿನಲ್ಲಿ 1 ವರ್ಷ ವಯಸ್ಸಿನ ಮಗು ಸೇರಿದಂತೆ  4 ಮಕ್ಕಳು ಜೀವಂತವಾಗಿ ಪತ್ತೆ!

Date:

Advertisements

ಅಮೆಜಾನ್ ದಟ್ಟ ಕಾಡಿನಲ್ಲಿ ಮೇ1 ರಂದು ಪತನಗೊಂಡಿದ್ದ ವಿಮಾನದಲ್ಲಿದ್ದ1 ವರ್ಷ ವಯಸ್ಸಿನ ಮಗು ಸೇರಿದಂತೆ ನಾಲ್ವರು ಮಕ್ಕಳು, 40 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಅಮೆಜಾನ್‌ ಪ್ರಾಂತ್ಯದ ಅರರಾಕುವಾರಾದಿಂದ ಸ್ಯಾನ್ ಜೋಸ್ ಡೆಲ್ ಗುವಿಯಾರ್‌ಗೆ ಮೇ 1 ರಂದು ಪ್ರಯಾಣ ಬೆಳೆಸಿದ್ದ ಒಂದೇ ಕುಟುಂಬದ  7 ಮಂದಿ ಮತ್ತು ಒಬ್ಬ ಪೈಲಟ್ ಇದ್ದ ʻಸೆಸ್ನಾ 206ʼ ಸಣ್ಣ ವಿಮಾನವೊಂದು ಎಂಜಿನ್ ವೈಫಲ್ಯದಿಂದಾಗಿ ದಟ್ಟ ಕಾಡಿನಲ್ಲಿ ಪತನವಾಗಿತ್ತು. ಘಟನೆಯಲ್ಲಿ ತಾಯಿ ಮತ್ತು ವಿಮಾನದ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ‌

ಅಪಘಾತ ನಡೆದು 2 ವಾರಗಳ ಬಳಿಕ ಅಮೆಜಾನ್ ದಟ್ಟ ಕಾಡಿನಲ್ಲಿ ಪತನವಾಗಿದ್ದ ವಿಮಾನದ ಅವಶೇಷಗಳಡಿಯಲ್ಲಿ ಮೂರು ಮೃತದೇಹಗಳನ್ನು ಕೊಲಂಬಿಯಾದ ಸೇನಾಪಡೆ ಪತ್ತೆಹಚ್ಚಿತ್ತು. ಆದರೆ ವಿಮಾನದಲ್ಲಿದ್ದ1 ವರ್ಷ ಮತ್ತು 13, 9, 4  ವಯಸ್ಸಿನ 4 ಮಕ್ಕಳು ನಾಪತ್ತೆಯಾಗಿದ್ದರು. ಬದುಕುಳಿದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು.

Advertisements

ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿತ್ತು. ಹೀಗಾಗಿ ಮಕ್ಕಳು ಬದುಕಿರುವ ನಿರೀಕ್ಷೆಯಲ್ಲಿ ಹುಡುಕಾಟವನ್ನು ತೀವ್ರಗೊಳಿಸಲಾಯಿತು.

ಮಕ್ಕಳನ್ನು ಪತ್ತೆಹಚ್ಚಲು ಕಾಡಿನಲ್ಲಿ 150 ಸೈನಿಕರು ಹುಡುಕಾಟ ನಡೆಸಿದ್ದರು. ನಾಯಿಗಳನ್ನು ಸಹಾಯಕ್ಕೆ ಸೇನೆ ಬಳಸಿಕೊಂಡಿತ್ತು. ಸ್ಥಳೀಯ ಬುಡಕಟ್ಟಿನ ಹತ್ತಾರು ಸ್ವಯಂಸೇವಕರೂ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದ್ದರು. ಹಸಿವಿನಿಂದ ಮಕ್ಕಳು ಸಾಯಬಾರದು ಎಂಬ ಕಾರಣಕ್ಕೆ ಆಹಾರ, ನೀರಿನ ಬಾಟಲಿಗಳನ್ನು ಹೆಲಿಕಾಪ್ಟರ್ ಮೂಲಕ ಮೇಲಿನಿಂದ ಕಾಡಿನೊಳಗಡೆ ಎಸೆಯಲಾಗಿತ್ತು.

ಇದೊಂದು ವಿಸ್ಮಯಕಾರಿ ಘಟನೆಯಾಗಿದೆ ಎಂದಿರುವ ಅಧ್ಯಕ್ಷ ಗುಸ್ತಾವೊ ಪೆಟ್ರೋ , ʻ 40 ದಿನಗಳ ಹುಡುಕಾಟದ ಬಳಿಕ ಸೇನಾಪಡೆ ಮತ್ತು ಸ್ಥಳೀಯ ಜನರು ಮಕ್ಕಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿಯೂ ದೈರ್ಯದಿಂದ ಬದುಕುಳಿಯುವ ಮಾರ್ಗಗಳನ್ನು ಮಕ್ಕಳು ಕಂಡುಹಿಡಿದಿರುವುದನ್ನು ಇತಿಹಾಸ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಮಕ್ಕಳು ನಿಶ್ಯಕ್ತರಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಡು ಅವರನ್ನು ರಕ್ಷಿಸಿದೆ ಮತ್ತು ಈಗ ಅವರು ಕೊಲಂಬಿಯಾದ ಮಕ್ಕಳು’ ಎಂದು ಪೆಟ್ರೋ ಟ್ವೀಟ್‌ ಮಾಡಿದ್ದಾರೆ.

ಪವಾಡ ಎಂಬಂತೆ ಬದುಕುಳಿದಿರುವ ಮಕ್ಕಳನ್ನು ಶನಿವಾರ ರಾಜಧಾನಿ ಬೊಗೋಟಾ ಸೇನಾ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಬಳಿಕ ಆಂಬುಲೆನ್ಸ್‌ನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

Download Eedina App Android / iOS

X