ರೈಲು ಡಿಕ್ಕಿ ಹೊಡೆದು ವೃದ್ಧರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಕೋಳ ರೈಲು ನಿಲ್ದಾಣದ ಸಮೀಪ ನಡೆದಿದೆ.
ಜಿಲ್ಲೆಯ ಕುಂದಗೋಳದ ರೈಲು ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಹಳಿ ದಾಟುವಾಗ ಯಲ್ಲಪ್ಪ ಶಿಗ್ಗಾಂವಿ (63) ಎಂಬುವರಿಗೆ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ‘ಮಾಂಜಾ ದಾರ’ಕ್ಕೆ ಸಿಲುಕಿ ಯುವಕ ಬಲಿ
ಅಂಬೇಡ್ಕರ್ ನಗರದ ನಿವಾಸಿ ಯಲ್ಲಪ್ಪ ಶಿಗ್ಗಾವಿ ಎಂದಿನಂತೆ ಶನಿವಾರ ಬೆಳಿಗ್ಗೆ ಬಹಿರ್ದೆಸೆಗೆ ಹೋಗಲು ರೈಲು ಕಂಬಿ ದಾಟುವಾಗ ವೇಗದಲ್ಲಿದ್ದ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ಮತ್ತು ಕುಟುಂಬಸ್ಥರು ಸೇರಿ ಅಂತ್ಯಸಂಸ್ಕಾರ ನಡೆಸಿದ್ದಾರೆ.