ಗದಗ | ‘ಮಾಂಜಾ ದಾರ’ಕ್ಕೆ ಸಿಲುಕಿ‌ ಯುವಕ ಬಲಿ

Date:

ಕಾರಹುಣ್ಣಿಮೆಯ ದಿನ ಉತ್ತರಕರ್ನಾಟಕದಲ್ಲಿ ಗಾಳಿಪಟ ಹಾರಿಸುವುದು ವಾಡಿಕೆ. ಈ ಗಾಳಿಪಟದ ಮುಂಜಾ ದಾರಕ್ಕೆ ಸಿಲುಕಿ ಗಾಯಗೊಂಡಿದ್ದ ಯುವಕ ಆರು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಮೃತಪಟ್ಟಿದ್ದಾನೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ ಗ್ರಾಮದ ರವಿ ಮೃತ ಯುವಕ.

ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ರವಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಜೀಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರು ದಿನಗಳ ಕಾಲ ನೋವಿನಿಂದ ನರಳುತ್ತಿದ್ದ ರವಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಮಾಂಜಾ ದಾರ ನಿಷೇಧಿಸುವಂತೆ ಒತ್ತಾಯ

ಕಾರಹುಣ್ಣಿಮೆ ಬಂದಿತೆಂದರೆ ನಗರದಲ್ಲಿ ಮಾಂಜಾ ದಾರ ಹೆಚ್ಚು ಮಾರಾಟ ಆಗುತ್ತಿದೆ. ಗಾಳಿಪಟ ಹಾರಿಸಲು ಈ ಮಾಂಜಾ ದಾರ ಬಳಸಲಾಗುತ್ತದೆ. ಮಾಂಜಾ ದಾರ ಸುಲಭವಾಗಿ ತುಂಡಾಗುವುದಿಲ್ಲ, ಮತ್ತು ಹರಿತವಾಗಿರುತ್ತದೆ. ಈ ದಾರದ ಎಳೆಗಳು ಅಲ್ಲಲ್ಲಿ ಬಿದ್ದಿರುತ್ತದೆ. ಇದರಿಂದ ಮೊನ್ನೆ ನಡೆದ ಕಾರಣಹುಣ್ಣಿಮೆಯ ದಿನದಂದು ಮಾಂಜಾ ದಾರದಿಂದ ಆರು ಜನರಿಗೆ ಗಾಯಗಳಾಗುವೆ.

ಮಾಂಜಾ ದಾರ ಮನುಷ್ಯರಿಗೆ ಮಾತ್ರವಲ್ಲ ಪಕ್ಷಿಗಳ ಸಾವಿಗೂ ಕಾರಣವಾಗಿದೆ. ಈ ಮಾಂಜಾ ದಾರ ಮಾರಾಟ ಮಾಡುವುದನ್ನು ನಿಷೇದಿಸುವಂತೆ ನಾನಾ ಸಂಘಟನೆಯ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಮುಖಂಡರೊಬ್ಬರು ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊಡಗು | ಮಳೆಗಾಲದ ಅವಘಡಗಳಿಗೆ ತುರ್ತಾಗಿ ಸ್ಪಂದಿಸಿ; ಶಾಸಕ ಮಂತರ್‌ಗೌಡ ನಿರ್ದೇಶನ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಂದಾಯ ಕರ್ಮಕಾಂಡ -3 | ಲಂಚವಿಲ್ಲದೆ ಈ ಇಲಾಖೆಯಲ್ಲಿ ಒಂದು ಕಡತವೂ ಚಲಿಸುವುದಿಲ್ಲ!

'ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಉನ್ನತ ಶ್ರೇಣಿಯಿಂದ ಕೆಳಹಂತದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ....

ದಕ್ಷಿಣ ಕನ್ನಡ | ಅಲೆಮಾರಿ ಶಿಳ್ಳೆಕ್ಯಾತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಡಿವೈಎಫ್ಐ ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬೋಳಾರ...

ಗದಗ | ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಕರವೇ ಆಗ್ರಹ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ಒತ್ತಾಯಿಸಿ ಗದಗ ಜಿಲ್ಲಾ ಕರ್ನಾಟಕ ರಕ್ಷಣಾ...

ಬೆಳಗಾವಿ | ಹಿಡಕಲ್ ಡ್ಯಾಂನಿಂದ ನೀರು ಹರಿಸುವಂತೆ ರೈತರ ಪ್ರತಿಭಟನೆ

ಹಿಡಕಲ್‌ ಜಲಾಶಯದಿಂದ ಘಟಪ್ರಭಾ ಎಡದಂಡೆ ನಾಲೆಯ ರೈತರಿಗೆ ನೀರುಹರಿಸುವಂತೆ ಕೋರಿ ಚಿಕ್ಕೋಡಿ-ಮಿರಜ್‌...