ಕಬಿನಿ ಹಿನ್ನೀರು ಪ್ರದೇಶದಲ್ಲಿ ಮೀನಿನ ಬಲೆಗಳು ವನ್ಯಜೀವಿಗಳ ಪಾಲಿಗೆ ಕಂಟಕವಾಗುತ್ತಿದ್ದು, ಜಿಂಕೆಯ ಕೊಂಬಿಗೆ ಮೀನಿನ ಬಲೆ ಸುತ್ತಿಕೊಂಡು ಪರದಾಡುತ್ತಿದೆ.
ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರ ಸಂತೆ ವಲಯದಿಂದ ಹೊರಡುವ ಸಫಾರಿಯಲ್ಲಿ ಡಿ ಜಿ ಕುಪ್ಪೆ ವ್ಯಾಪ್ತಿಯಲ್ಲಿ ಬಲ ಕೊಂಬಿನಲ್ಲಿ ಮೀನಿನ ಬಲೆ ಸಿಲುಕಿಸಿಕೊಂಡಿರುವ ಜಿಂಕೆ ಕಾಣಿಸಿಕೊಂಡಿದೆ.
ಕಬಿನಿ ಹಿನ್ನೀರು ಬಂಡೀಪುರ ಮತ್ತು ನಾಗರಹೊಳೆ ಎರಡು ಅರಣ್ಯ ಪ್ರದೇಶದಲ್ಲಿ ಚಾಚಿಕೋಂಡಿದೆ. ಕಾಡಂಚಿನ ಗ್ರಾಮಸ್ಥರು ಕೆಲವೆಡೆ ಮೀನುಗಾರಿಕೆ ನಡೆಸುತ್ತಾರೆ. ಕೆಲವೊಮ್ಮೆ ಮೀನು ಹಿಡಿದ ನಂತರ ಬಲೆಗಳನ್ನು ಬಿಸಾಡಿ ಹೋಗಿರುತ್ತಾರೆ.

ನೀರು ಕಡಿಮೆಯಾದಾಗ ಮೀನಿನ ಬಲೆ ದಡದಲ್ಲಿಯೇ ಉಳಿದಿರುತ್ತದೆ. ಜತೆಗೆ ಮೀನು ಹಿಡಿಯುವಾಗ ಅರಣ್ಯ
ಸಿಬ್ಬಂದಿಯ ಕಾರ್ಯಾಚರಣೆಗೂ ಹೆದರಿ ಬಲೆಗಳನ್ನು ಬಿಸಾಡಿ ಓಡಿರುತ್ತಾರೆ.
ಕಬಿನಿ ಹಿನ್ನೀರಿಗೆ ನೀರು ಕುಡಿಯಲು ಬರುವ ಹಲವು ವನ್ಯಜೀವಿಗಳು ನೆಲದ ಮೇಲೆ ಬಲೆ ಬಿದ್ದಿರುವುದನ್ನು ಗಮನಿಸದೆ ಬಲೆಯನ್ನು ತುಳಿದು. ಕೊಂಬಿನಿಂದ ಬಿಡಿಸಿಕೊಳ್ಳಲು ಹೋಗಿ ಸಿಕ್ಕಿಸಿಕೊಳ್ಳುತ್ತವೆ. ಇದರಿಂದ ಅವುಗಳ ಸಹಜ ಜೀವನಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಬಲೆಯನ್ನು ಜಿಂಕೆ ಕೊಂಬಿನಿಂದ ಬಿಡಿಸಬೇಕು ಎಂಬುದು ವನ್ಯಜೀವಿ ಪ್ರೀಯರ ಆಗ್ರಹವಾಗಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಾಲಕಿ ಸಾವು ಪ್ರಕರಣ; ಮಂಜಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು