ತಾಯಿಯ ಆಸೆಯನ್ನು ನೆರವೇರಿಸಲು ಮಕ್ಕಳು ನೂರು ಅಡಿ ವಿಸ್ತೀರ್ಣದ ಮನೆಯನ್ನು ಶಿಫ್ಟ್ ಮಾಡಲು ಮುಂದಾಗಿದ್ದಾರೆ. ಮಹಾದೇವಪುರ ವಿಧಾನಸಭಾ ಕ್ಷೇತ್ರದ ಬಿಇಎಂಎಲ್ ಲೇಔಟ್‌ನಲ್ಲಿರುವ ಮನೆಯನ್ನು ಹಿಂದಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆಯತ್ತಿದೆ.
ಬಿಇಎಂಎಲ್ ಲೇಔಟ್ ನಲ್ಲಿರುವ ಯಲ್ಲಪ್ಪನವರ ಮನೆ ತುಂಬಾ ಜಲಾವೃತವಾಗುತ್ತಿತ್ತು. ಎರಡರಿಂದ ಮೂರು ಅಡಿಗಳಷ್ಟು ಕೊಳಚೆ ನೀರು ನಿಲ್ಲುತ್ತಿತ್ತು. ಅದಕ್ಕೆ ಮಕ್ಕಳು ಮನೆಯನ್ನು ಕೆಡವಿ ಹೊಸ ಮನೆಯನ್ನು ನಿರ್ಮಿಸಲು ಯೋಜಿಸಿದ್ದರು. ಆದರೆ ತಾಯಿ ಯಲ್ಲಮ್ಮ, ತಾಯಿ ಯಲ್ಲಮ್ಮ ತಾನು ಕಷ್ಟಪಟ್ಟು ಕಟ್ಟಿಸಿದ ಮನೆಯನ್ನು ಕೆಡವಬಾರದು ಎಂದು ಮಕ್ಕಳಿಗೆ ತಿಳಿ ಹೇಳಿದ ಕಾರಣ ನೀರಿನಲ್ಲಿ ಮುಳುಗುವ ಮನೆಯನ್ನು ಕೆಡುವುದರ ಬದಲಾಗಿ ಶಿಫ್ಟ್ ಮಾಡಲು ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚೀನಾಕ್ಕೆ ತಲೆನೋವಾಗಿರುವ ಜನಸಂಖ್ಯೆ- ಭಾರತ ಕಲಿಯಬೇಕಿರುವ ಪಾಠಗಳು!
ಮನೆ ಶಿಫ್ಟ್ ಮಾಡಲು ಬಿಹಾರ ಮೂಲದ ಶ್ರೀರಾಮ್ ಹೌಸ್ ಲಿಫ್ಟಿಂಗ್ ಅಂಡ್ ಶಿಫ್ಟಿಂಗ್ ಕಂಪನಿಯನ್ನು ಸಂಪರ್ಕಿಸಲಾಗಿದೆ. ಮನೆಯನ್ನು ಶಿಫ್ಟ್ ಮಾಡಲು 200 ಕಬ್ಬಿಣದ ಜಾಕ್ ಮತ್ತು 100 ಕಬ್ಬಿಣದ ರೋಲರ್‌ಗಳ ಬಳಕೆ ಮಾಡಲಾಗಿದೆ. ಶಿಫ್ಟ್ ಮಾಡುತ್ತಿರುವ ಮನೆ ನಿರ್ಮಿಸಲು 13 ಲಕ್ಷ ರುಪಾಯಿ ವೆಚ್ಚವಾಗಿತ್ತು. ಈಗ ಈ ಮನೆಯನ್ನು ನಿರ್ಮಾಣ ಮಾಡಲು ಅಂದಾಜು 70 ಲಕ್ಷ ರುಪಾಯಿ ಬೇಕಾಗುತ್ತದೆ. ಸದ್ಯ ಮನೆಯನ್ನು 15 ಅಡಿ ಹಿಂದಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ನಂತರ 30 ದಿನಗಳಲ್ಲಿ 85 ಅಡಿ ಹಿಂದಕ್ಕೆ ಮನೆಯನ್ನು ಶಿಫ್ಟ್ ಮಾಡಲಾಗುತ್ತದೆ. ಮನೆಯನ್ನು ಶಿಫ್ಟ್ ಮಾಡಲು ಶ್ರೀರಾಮ್ ಕಂಪನಿಗೆ ಹತ್ತು ಲಕ್ಷ ಗುತ್ತಿಗೆ ನೀಡಲಾಗಿದೆ.
ಶ್ರೀರಾಮ್ ಕಂಪನಿ ಈಗಾಗಲೇ ಬೇರೆ ಬೇರೆ ನಗರಗಳಲ್ಲಿ ಮನೆಗಳನ್ನು ಸ್ಥಳಾಂತರಿಸಿದ್ದು ಸಾಕಷ್ಟು ಪರಿಣಿತಿಹೊಂದಿದೆ. ಈ ಕಂಪನಿ ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಎರಡು ಅಂತಸ್ತಿನ ಮನೆಯನ್ನು ಲಿಫ್ಟ್ ಮಾಡಲು ಮುಂದಾಗಿದೆ.

೧೦೦ ಅಡಿ ಉದ್ದ
೧೦೦ ಚದರ ಅಡಿ ವಿಸ್ತೀರ್ಣ(ಹರವು)
೧೦’*೧೦’= ೧೦೦ ಚದರ ಅಡಿ/ಜನರ ಮಾತಲ್ಲಿ ಒಂದು ಚದರ
ಉದ್ದxಅಗಲ= ಉದ್ದಗಲ/ಹರವು/ವಿಸ್ತೀರ್ಣ/ಏರಿಯಾ