2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೀರ್ನಿಗೆ ಕೇವಲ ಒಂದು ತಿಂಗಳಷ್ಟೇ ಬಾಕಿ ಇದೆ. ಎಲ್ಲ ತಂಡಗಳು ಐಪಿಎಲ್‌ಗೆ ಸಿದ್ದತೆ ನಡೆಸುತ್ತಿವೆ. ಆಟಗಾರರು ಟೂರ್ನಿಗೆ ಸಜ್ಜಾಗುತ್ತಿದ್ದಾರೆ ಈ ನಡುವೆ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದ್ದು, ಸ್ಟಾರ್ ಆಟಗಾರ, ಸ್ಪಿನ್ನರ್ ಅಲ್ಲಾ ಗಝನ್‌ಫರ್ ಅವರು ತಂಡವನ್ನು ತೊರೆದಿದ್ದು, ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡದಲ್ಲಿರುವ ಅಲ್ಲಾ ಗಝನ್‌ಫರ್ ಅವರನ್ನು 2024ರಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಅವರ ಮೇಲೆ 4.80 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿತ್ತು. ಆದರೆ, ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ, ಅವರು ತಂಡದಿಂದ ಹೊರ ನಡೆದಿದ್ದಾರೆ.
ಇತ್ತೀಚೆಗೆ ನಡೆದ ಅಫ್ಘಾನ್ ಮತ್ತು ಝಿಂಬಾಬ್ವೆ ನಡುವಿನ ಕ್ರಿಕೆಟ್ ಟೂರ್ನಿಯಲ್ಲಿ ಅಲ್ಲಾ ಗಝನ್‌ಘರ್ ಅವರು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದರು. ಆದಾಗ್ಯೂ, ಆಟದ ವೇಳೆ, ಅವರ ಮೂಳೆ ಮುರಿದಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ. ಹೀಗಾಗಿ, ಅವರು ಕನಿಷ್ಠ 4 ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
ಅವರು ಈ ಅವಧಿಯಲ್ಲಿ ಯಾವುದೇ ಆಟದಲ್ಲಿಯೂ ಭಾಗಿಯಾಗುತ್ತಿಲ್ಲ. ಇದೇ ಸಮಯದಲ್ಲಿಯೇ ಐಪಿಎಲ್ ಟೂರ್ನಿಯೂ ನಡೆಯುವುದರಿಂದ, ಅವರು ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಅವರು ಐಪಿಎಲ್ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಚಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನ್ ತಂಡದಿಂದಲೂ ಹೊರ ಉಳಿಯಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ಈಗ ಗಝನ್‌ಫರ್ ಅವರ ಸ್ಥಾನಕ್ಕೆ ಮತ್ತೊಬ್ಬ ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಆಟಗಾರರು;
ಹಾರ್ದಿಕ್ ಪಾಂಡ್ಯ (ನಾಯಕ),
ರೋಹಿತ್ ಶರ್ಮಾ,
ಸೂರ್ಯಕುಮಾರ್ ಯಾದವ್,
ಜಸ್ಪ್ರೀತ್ ಬುಮ್ರಾ,
ತಿಲಕ್ ವರ್ಮಾ,
ಟ್ರೆಂಟ್ ಬೌಲ್ಟ್,
ನಮನ್ ಧೀರ್,
ರಾಬಿನ್ ಮಿಂಝ್,
ಕರ್ಣ್ ಶರ್ಮಾ,
ದೀಪಕ್ ಚಹರ್,
ರೀಸ್ ಟೋಪ್ಲಿ,
ರಿಯಾನ್ ರಿಕೆಲ್ಟನ್,
ವಿಲ್ ಜ್ಯಾಕ್ಸ್,
ಮಿಚೆಲ್ ಸ್ಯಾಂಟ್ನರ್,
ಕರ್ಣ್ ಶರ್ಮಾ,
ರಾಜ್ವ ಶರ್ಮಾ,
ಸತ್ಯನಾರಾಯಣ ರಾಜು,
ರಾಜ್ ಬಾವ,
ಕೃಷ್ಣನ್ ಶ್ರೀಜಿತ್,
ಅಶ್ವಾಣಿ ಕುಮಾರ್,
ಬೆವನ್ ಜೇಕಬ್ಸ್,
ಅರ್ಜುನ್ ತೆಂಡೂಲ್ಕರ್,
ಲಿಝಾಡ್ ವಿಲಿಯಮ್ಸ್