ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ತಿಪಟೂರು ರಸ್ತೆಯಲ್ಲಿರುವ ಮೈಲಾರ ಕಾಂಪ್ಲೆಕ್ಸ್ ನಲ್ಲಿ ನವ್ಯ ದಿಶಾ ಸಂಸ್ಥೆಯಿಂದ ಮಹಿಳೆಯರಿಗೆ ಯುವ ಉದ್ಯಮಿ ತರಬೇತಿಯನ್ನು ಬುಧವಾರ ಆರಂಭಿಸಲಾಯಿತು.
ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ತರಬೇತಿಯನ್ನು ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಸೃಜನ ಮಹಿಳಾ ಸಂಘಟನೆ ಅಧ್ಯಕ್ಷೆ ಎನ್.ಇಂದಿರಮ್ಮ ಮಾತನಾಡಿ ನೀವೆಲ್ಲರೂ ಹೊಸ ದಿಕ್ಕಿನಲ್ಲಿ ನಡೆಯಲು ಆರಂಭಿಸಬೇಕಿದೆ. ಅದಕ್ಕೆ ತಕ್ಕ ಮಾರ್ಗದರ್ಶನ ಮತ್ತು ತರಬೇತಿಯನ್ನು ನವ್ಯ ದಿಶ ಸಂಸ್ಥೆಯವರು ಒಂದು ವಾರಗಳ ಕಾಲ ನೀಡಲಿದ್ದಾರೆ. ತರಗತಿಯನ್ನು ಪಡೆದು ಯಶಸ್ವಿ ಉದ್ಯಮಿಗಳಾಗಿಙ್ಮ ಎಂದು ಶುಭ ಹಾರೈಸಿದರು
ಸುವರ್ಣ ವಿದ್ಯಾ ಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ಉದ್ಯಮಿಯಾಗಲು ಆರ್ಥಿಕ ಶಿಸ್ತು ಮತ್ತು ಬದ್ಧತೆ ಅತ್ಯಗತ್ಯ ಎಂದು ಹೇಳಿ, ತರಬೇತಿಯಲ್ಲಿ ಬಹಳ ಶ್ರದ್ಧೆಯಿಂದ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪೂರ್ಣಮ್ಮ ಮತ್ತು ಮುಖ್ಯ ತರಬೇತುದಾರರಾದ ಕೆಂಪಣ್ಣ ಮಾತನಾಡಿದರು.
ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ತರಬೇತುದಾರರಾದ ಸೀ ಎಮ್ ಎಸ್ ಗೌಡ ಮತ್ತು ಅಶ್ವಿನಿ ಹಾಗೂ ಹುಳಿಯಾರು ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಭಾಗವಹಿಸಿದ್ದರು.