ಕಲಬುರಗಿ | ಪ್ರಥಮ ತ್ರಿಪಿಟಕ ಪಠಣ ಮಹೋತ್ಸವ

Date:

Advertisements

ದಮ್ಮ ಸಜ್ಜಾಯನ ಹಾಗೂ ಪ್ರಥಮ ತ್ರಿಪಿಟಕ ಪಠಣ ಮಹೋತ್ಸವವನ್ನು ರಾಯಚೂರು ಜಿಲ್ಲೆ ಚಿತ್ತಾಪುರ ತಾಲೂಕಿನ ಐತಿಹಾಸಿಕ ಸನ್ನತಿ (ಕನಗನಹಳ್ಳಿ) ಗ್ರಾಮದ ಬೌದ್ಧ ಮಹಾಸ್ಥೂಪದ ಆವರಣದಲ್ಲಿ ನಡೆಸಲಾಯಿತು.

ಬೆಂಗಳೂರು ಮಹಾಬೋಧಿ ಸೊಸೈಟಿ ಪ್ರಧಾನ ಕಾರ್ಯದರ್ಶಿ ಭಂತೆ ಆನಂದ ಥೇರಾ ಮಾತನಾಡಿ, “ತ್ರಿಪಿಟಕ ಎಂದರೆ ಮೂರು ಬುಟ್ಟಿಗಳು. ವಿನಯ ಪೀಠಕ, ಸುತ್ತ ಪೀಠಕ ಹಾಗೂ ಅಭಿದಮ್ಮ ಪೀಠಕ ಎಂಬ ಈ ಮೂರು ಪುಸ್ತಕಗಳು ಬೌದ್ಧ ಧರ್ಮೀಯರ ಪವಿತ್ರ ಗ್ರಂಥಗಳಾಗಿವೆ. ಭಂತೆ ಇತಿಕಾ ಮಹಾಥೇರಾ ಬೆಂಗಳೂರು ಮಹಾಬೋಧಿ ಸೊಸೈಟಿ ಅಧ್ಯಕ್ಷರಾದ ಭಂತೆ ಕಶ್ಯಪ ಮಹಾಥೇರಾ ಧಮ್ಮ ಸಂದೇಶ” ನೀಡಿದರು.

ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ ಹರ್ಷಕುಮಾರ ಕುಗ್ವೆ ಮಾತನಾಡಿ, “ಸಾಮ್ರಾಟ ಅಶೋಕನ ಬಂಡೆ ಶಾಸನಗಳು ದೇಶಾದ್ಯಂತ ಹಲವೆಡೆ ದೊರಕಿವೆ. ಆದರೆ, ಸನ್ನತಿ ಗ್ರಾಮವೊಂದರಲ್ಲೇ 200ಕ್ಕೂ ಹೆಚ್ಚು ಶಾಸನಗಳು ಸಿಕ್ಕಿವೆ. ಮೊಟ್ಟ ಮೊದಲು ಶಾಸನಗಳು ಸಿಕ್ಕಿದ್ದು ಕನಗನಹಳ್ಳಿಯಲ್ಲಿ ಎನ್ನುವುದ ಎಷ್ಟು ಸತ್ಯವೋ, ಶಾತವಾಹನರು ಕರ್ನಾಟಕ ಮೂಲದ ಅರಸರು ಎನ್ನುವುದು ಅಷ್ಟೇ ಸತ್ಯ. ಕನ್ನಡಿಗರ ಮತ್ತು ಕರುನಾಡಿನ ಮೊಟ್ಟ ಮೊದಲ ಧರ್ಮ ಅದು ಬೌದ್ಧ ಧಮ್ಮ. ಶಾತವಾಹನರ ಇತಿಹಾಸ ಬರೆಯುವಾಗ ಇತಿಹಾಸಕಾರರು ಉದ್ದೇಶಪೂರ್ವಕವಾಗಿ ಬೌದ್ಧ ಧರ್ಮ ಮರೆಮಾಚಿದ್ದಾರೆ” ಎಂದು ಆರೋಪಿಸಿದರು.

Advertisements

ಅಮೆರಿಕದ ಐ.ಟಿ.ಸಿ.ಸಿ. ಸಂಸ್ಥಾಪಕಿ ವಾಗ್ಮೋ ದೀಕ್ಷಿ ಅವರು ಸಾಮ್ರಾಟ ಅಶೋಕ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಭಂತೆ ಧಮ್ಮಾನಂದ ಮಹಾಥೇರಾ, ಭಂತೆ ಮನೋರಕ್ಖಿತ ಥೇರಾ, ಭಂತೆ ಜ್ಞಾನ ಸಾಗರ, ಭಂತೆ ವರಜ್ಯೋತಿ, ಭಂತೆ ಧಮ್ಮಸಿರಿ, ಭಂತೆ ಖಂತಿಸಾರೋ, ಭಂತೆ ಲಂಕಾನಂದ ಸೇರಿದಂತೆ 200ಕ್ಕೂ ಅಧಿಕ ಭಂತೆಜಿಗಳು ಸಾನಿಧ್ಯ ವಹಿಸಿದ್ದರು.

ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಪಿಯು ವಿದ್ಯಾರ್ಥಿಗಳ ತಾಲೂಕು ರಸಪ್ರಶ್ನೆ ಸ್ಪರ್ಧೆ ಸಾಧನೆಗೆ ಸತತ ಅಧ್ಯಯನ ಅಗತ್ಯ: ಡಾ. ಅಜೀಜ್

ಕಾರ್ಯಕ್ರಮದಲ್ಲಿ ಟೋಪಣ್ಣ ಕೋಮಟೆ, ವಿಠ್ಠಲ ದೊಡ್ಡಮನಿ, ರವಿಕಿರಣ ಒಂಟಿ, ಮರಿಯಪ್ಪ ಹಳ್ಳಿ, ಅರ್ಜುನ್ ಭದ್ರೆ, ದೇವಿಂದ್ರ ಹೆಗಡೆ, ಸೂರ್ಯಕಾಂತ ನಿಂಬಾಳಕರ, ಸುರೇಶ ಮೆಂಗನ, ಬಸವರಾಜ ಬೆಣ್ಣೂರ, ಎಸ್.ಆರ್.ಕೊಲ್ಲೂರ, ನೀಲಕಂಠ ಬಡಿಗೇರ, ದೇವಿಂದ್ರ ಹೆಗಡೆ, ಮಲ್ಲಿಕಾರ್ಜುನ ಪೂಜಾರಿ, ಸೂರ್ಯಕಾಂತ ರದ್ದೇವಾಡಿ, ಲಕ್ಷ್ಮೀಕಾಂತ ಹುಬ್ಳಿ, ಮೋನಪ್ಪ ನಡಗೇರಿ, ಬಾಬು ಬಂದಳ್ಳಿ ಶಿವಯೋಗಿ ದೇವಿದ್ರಕರ, ಶ್ರೀಮಂತ ಭಾವಿಮನಿ, ಸಂದೀಪ ಕಟ್ಟಿ ಶರಣಬಸು ಸಿರೂರಕರ, ಮರೆಪ್ಪ ಚಟ್ಟೇರಕರ್, ವಿಶ್ವನಾಥ ನಾಟ್ಟೇಕರ್, ಬಸವರಾಜ ಚಿಪ್ಪರ್, ನಿಂಗಪ್ಪ ದೋರನಹಳ್ಳಿ, ಶಿವಕುಮಾರ ಪೋತೆ, ಶೇಖರ್ ಬಡಿಗೇರ್, ಮರೆಪ್ಪ ಜಾಲಿಮಂಚಿ, ಬಸವರಾಜ್ ಗುಡಿಮನಿ, ನಿಂಗಣ್ಣ ನಾಟ್ಟೇಕರ್, ದಿನೇಶ ದೊಡ್ಡಮನಿ, ಸಂತೋಷ ಮೆಲ್ಮನಿ, ಮಿಲಿಂದ್ ಸಾಗರ್, ಭೂತಾಳಿ ನಡಗಟ್ಟಿ, ಪರಶುರಾಮ ನಡಗಟ್ಟಿ, ಶಿವು ಹೆಗ್ಡೆ, ಚಂದಪ್ಪ ಕಟ್ಟಿಮನಿ, ಬಸಲಿಂಗಪ್ಪ, ರಾಹುಲ್ ಹುಲಿಮನಿ, ರವೀಂದ್ರನಾಥ್ ಹೊಸಮನಿ, ರಾಯಪ್ಪ, ವಿದ್ಯಾಧರ್ ಮಾಳಗೆ, ಪುಟ್ಟಮನಿ ದೇವಿದಾಸ್, ವಿಠಲ್ ದೊಡ್ಡಮನಿ, ಮಹಾತಪ್ಪ ಸಂಗಾವಿ
ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X