ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಎಂಇಐಎಫ್) ಮತ್ತು ಯೆನೆಪೋಯ ವಿದ್ಯಾ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಮಂಗಳೂರಿನ ಬಲ್ಮಠ ಯೆನೆಪೋಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ 45 ದಿನ ಉಚಿತವಾಗಿ ನೀಟ್, ಸಿಇಟಿ ಕ್ರ್ಯಾಶ್ ಕೋರ್ಸ್ ಏರ್ಪಡಿಸಲಾಗಿದೆ. ತರಗತಿಗಳು ಮಾರ್ಚ್ 21ರಿಂದ ಆರಂಭವಾಗಲಿವೆ.
ಯೆನೆಪೋಯ ಪಿ.ಯು. ಕಾಲೇಜಿನ NEET, CET ಪರಿಣಿತ ತರಬೇತುದಾರರು ಈ ತರಬೇತಿ ನೀಡಲಿದ್ದಾರೆ. ಸೀಮಿತ ಆಕಾಂಕ್ಷಿಗಳಿಗೆ ಅವಕಾಶವಿದ್ದು, ಎಂಇಐಎಫ್ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ನಡೆಸಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ, ಸೀಟುಗಳ ಆಯ್ಕೆ ಮಾಡಲಾಗುತ್ತದೆ ಎಂದು ಎಂಇಐಎಫ್ ಅಧ್ಯಕ್ಷರಾದ ಮೂಸಬ್ಬ ಬ್ಯಾರಿ ಜೋಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
NEET, CET ಆಕಾಂಕ್ಷಿಗಳು ಎಂಇಐಎಫ್ ಕಚೇರಿಯ ವಾಟ್ಸ್ಯಾಪ್ ಸಂಖ್ಯೆ 8792115666 ಮೂಲಕ ಅರ್ಜಿ ಪಡೆಯಬಹುದು. ಫೆಬ್ರವರಿ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕನ್ವಿನರ್‌ಗಳಾದ ಬಿ.ಎ ಇಕ್ಬಾಲ್ (9343562737) ಮತ್ತು ಮುಹಮ್ಮದ್ ಶಹಾಮ್ (8722038664) ಅವರನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ?: ಮಂಗಳೂರು | ಅಂಬ್ಲಮೊಗರು ಗ್ರಾಮದ ನೂರಾರು ಎಕರೆ ಕೃಷಿ ಯೋಗ್ಯವಾದ ಭೂಮಿ ಖಾಸಗಿ ವ್ಯಕ್ತಿಗಳ ಕೈಗೆ ?
