ಬೀದರ್‌ | ಸಾಂಸ್ಕೃತಿಕ ಅಧ್ಯಯನವು ಆಧುನಿಕ ಸಂಶೋಧನೆಯ ಭಾಗ : ದುಶಾನ್ ಡೀಕ್

Date:

Advertisements

ಸಾಂಸ್ಕೃತಿಕ ಅಧ್ಯಯನವು ಸಮಾಜ, ರಾಜಕಾರಣ, ಆರ್ಥಿಕತೆ, ಧಾರ್ಮಿಕತೆ ಹಾಗೂ ಲಿಂಗ ರಾಜಕಾರಣಗಳಲ್ಲಿ ಕಂಡು ಬರುವ ಅಧಿಕಾರ ಮತ್ತು ಅಧೀನತೆಯ ಸಂಕಥನವಾಗಿದೆ. ಹಲವು ಸಿದ್ಧಾಂತಗಳನ್ನು ಪರಿಕಾರವಾಗಿ ಬಳಸಿ ಸಾಂಸ್ಕೃತಿಕ ಅಧ್ಯಯನ ನಡೆಸಲಾಗುತ್ತಿದೆ ಎಂದು ಸ್ಲೋವಾಕಿಯಾದ ಕೊಮೆನಿಯಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ದುಶಾನ್ ಡೀಕ್ ಹೇಳಿದರು.

ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಶೋಧಕರೊಂದಿಗೆ ಸಂವಾದ ಸಮಾರಂಭದಲ್ಲಿ ಮಾತನಾಡಿದ ಅವರು, ʼಸಾಂಸ್ಕೃತಿಕ ಅಧ್ಯಯನವು ಆಧುನಿಕ ಸಂಶೋಧನೆಯ ಭಾಗವಾಗಿದೆ. ಇದೊಂದು ಬೌದ್ಧಿಕ ಮತ್ತು ವೈಚಾರಿಕ ಪ್ರಕ್ರಿಯೆಯಾಗಿದೆʼ ಎಂದರು.

ʼಅಧಿಕಾರದ ರಚನೆ, ಚಾರಿತ್ರಿಕ ಸಂದರ್ಭಗಳು, ಸಮಾಜದ ಸ್ತರ ವಿನ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಸಾಂಸ್ಕೃತಿಕ ಅಧ್ಯಯನವು ಒದಗಿದ ಅರಿವಿನ ಕಣ್ಣಾಗಿದೆ. ಮಾರ್ಕ್ಸ್ ವಾದಿ, ಸ್ತ್ರೀವಾದಿ ಸಿದ್ಧಾಂತಗಳನ್ನು ಅನ್ವಯಿಸಿ ಮಾನವಶಾಸ್ತ್ರ, ಸಮಾಜಶಾಸ್ತ್ರ ಸೇರಿ ಅಂತರ್ಶಿಸ್ತೀಯ ಅಧ್ಯಯನದ ಕ್ರಮ ಸಾಂಸ್ಕೃತಿಕ ಅಧ್ಯಯನದಲ್ಲಿ ಸಾಧ್ಯʼ ಎಂದರು.

Advertisements

ʼಚರಿತ್ರೆಯ ರೂಪುಗೊಳ್ಳುವ ಕ್ರಮ ಯಾವಾಗಲು ಕೇಂದ್ರದಿಂದಲೇ ಅನುಸರಿಸಿದ್ದೇವೆ. ಜನ ಸಮುದಾಯದ ಸಂಸ್ಕೃತಿ, ಆಚರಣೆ, ನಂಬಿಕೆಗಳ ಒಟ್ಟು ಮೌಲ್ಯಗಳನ್ನು ಗ್ರಹಿಸಿದರೆ, ಅಂಚಿನಲ್ಲಿನರಿಗೂ ಇರುವ ಐತಿಹಾಸಿಕ ಅಸ್ಮಿತೆಯನ್ನು ಕಟ್ಟಿಕೊಡಬಹುದು. ಜನ ಸಮುದಾಯದಿಂದಲೇ ಕಲ್ಯಾಣ ನೆಲದಲ್ಲಿ ಚಳುವಳಿ ಆರಂಭವಾಯಿತು. ಜನರ ತೀವ್ರವಾದ ಅನುಭವಗಳೇ ಸೃಜನಗೊಂಡು ವಚನಗಳಾದವು. ವಚನ ಸಾಹಿತ್ಯ ತನ್ನೊಳಗೆ ಹಲವು ತಾತ್ವಿಕತೆಗಳು ಇರಿಸಿಕೊಂಡು ಇಂದಿಗೂ ಸಾಂಸ್ಕೃತಿಕ ಅಧ್ಯಯನದ ವ್ಯಾಪ್ತಿಯಲ್ಲಿ ಹಲವು ಆಯಾಮಗಳಲ್ಲಿ ವಿಶ್ಲೇಷಣೆಗೆ ಒಳಗಾಗುತ್ತಿದೆʼ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಸಾಂಸ್ಕೃತಿಕ ಅಧ್ಯಯನವನ್ನು ವಿದ್ವತ್ ವಲಯದಲ್ಲಿ, ಬೌದ್ಧಿಕ ಲೋಕದಲ್ಲಿ ವಿಮರ್ಶೆಯ ಹೊಸ ಮಾದರಿಯಾಗಿ ಈ ಕಾಲದಲ್ಲಿ ಪರಿಗಣಿಸಲಾಗುತ್ತದೆ. ಬಹುತ್ವದ ಆಯಾಮವನ್ನು ಪ್ರತಿಪಾದಿಸುವ ಸಾಂಸ್ಕೃತಿಕ ಅಧ್ಯಯನವು ಜನಪ್ರಿಯ ಸಂಸ್ಕೃತಿಯ ಕುರಿತು ಅನುಸಂಧಾನ ನಡೆಸುತ್ತಿದೆʼ ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಜಾತಿ ಆದಾಯ ಪ್ರಮಾಣ ಪತ್ರಕ್ಕೆ ಸಹಾಯವಾಣಿ ಆರಂಭ : ಡಿಸಿ ಶಿಲ್ಪಾ ಶರ್ಮಾ

ಡಾ.ದುಶಾನ್ ಡೀಕ್ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ವಿವೇಕಾನಂದ ಶಿಂಧೆ, ಶ್ರೀನಿವಾಸ ಉಮಾಪುರೆ, ಪವನ ಪಾಟೀಲ, ನೀಲಮ್ಮ ಮೇತ್ರೆ, ನಾಗವೇಣಿ ಬಿರಾದಾರ,ರೋಶನ್ ಬಿ, ಸಂಗೀತಾ ಮಹಾಗಾವೆ, ಗುರುದೇವಿ ಕಿಚಡೆ, ಪ್ರವೀಣ ಬಿರಾದಾರ, ಕೃಷ್ಣ ಸಸ್ತಾಪುರ, ನಾಗರಾಜ ನಾಸೆ ಅನೇಕರಿದ್ದರು. ಚನ್ನಬಸಪ್ಪ ಗೌರ ನಿರೂಪಿಸಿದರು. ಗಂಗಾಧರ ಸಾಲಿಮಠ ಸ್ವಾಗತಿಸಿದರು. ಜಗದೇವಿ ಜವಳಗೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

Download Eedina App Android / iOS

X