ಕೊಡಗು ಜಿಲ್ಲೆಯಲ್ಲಿ ಹಿಂದೆ ಉಂಟಾಗಿದ್ದ ಭೂ ಕುಸಿತದಿಂದ ಸಂತ್ರಸ್ತರಾಗಿದ್ದ ಕಟುಂಬಗಳಿಗೆ ಬೆಂಗಳೂರಿನ ಜಾಗೃತಿ ಸಂಸ್ಥೆ ಮತ್ತು ಮಡಿಕೇರಿಯ ಸಿಸ್ಕೋ ಕಂಪನಿ ನೇತೃತ್ವದಲ್ಲಿ ಪಡಿತರ ಮತ್ತು ನೈರ್ಮಲ್ಯ ಕಿಟ್ ವಿತರಣೆ ಮಾಡಲಾಗಿದೆ.
ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು, ಮಾದಾಪುರ (ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕು) ಗ್ರಾಮಗಳ ಜನರ ಪರಿಸ್ಥಿತಿ ಅವಲೋಕಿಸಿ 84 ಮಂದಿಗೆ ಕಿಟ್‌ಗಳನ್ನು ಎರಡೂ ಸಂಸ್ಥೆಗಳು ವಿತರಣೆ ಮಾಡಿವೆ.

ಪಡಿತರ ಕಿಟ್ (ವಿಶೇಷವಾಗಿ ಸ್ವಯಂಪ್ರೇರಿತರು ಅಗತ್ಯ ಪಡಿತರಗಳನ್ನು ಪ್ಯಾಕ್ ಮಾಡಿರುವುದಾಗಿದೆ), ನೈರ್ಮಲ್ಯ ಕಿಟ್ (ಹೆಣ್ಣು ಮಕ್ಕಳಿಗೆ), ಶಿಕ್ಷಣ ಸಾಮಗ್ರಿ (ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ)ವಿತರಣೆ ಮಾಡಲಾಯಿತು. ಮಾದಾಪುರ ಸರ್ಕಾರಿ ಶಾಲೆಯ ಗೋಡೆಯಲ್ಲಿ ಮಂಡಲ ಚಿತ್ರಗಳನ್ನು ಬಿಡಿಸಲಾಯಿತು.
ಈ ಸಂದರ್ಭ ಸಿಸ್ಕೋ ಕಂಪನಿಯ ಬಾನಂಡ ಸಂಪತ್, ಜಾಗೃತಿ ಸಂಸ್ಥೆಯ ಕಣ್ಣನ್, ಶರಣ್, ನೋಯೇಲ್ ಹಾಗೂ ಇತರರು ಇದ್ದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಗ್ನಿ ಅವಘಡ; ಲಕ್ಷಾಂತರ ಮೌಲ್ಯದ ಹತ್ತಿ ಭಸ್ಮ