ಚೊಚ್ಚಲ ಚಾಂಪಿಯನ್ಸ್‌ ಲೀಗ್‌ ಪ್ರಶಸ್ತಿ ಗೆದ್ದ ಮ್ಯಾಂಚೆಸ್ಟರ್‌ ಸಿಟಿ!

Date:

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಚಾಂಪಿಯನ್‌ ಮ್ಯಾಂಚೆಸ್ಟರ್‌ ಸಿಟಿ, ಕ್ಲಬ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ  ಚಾಂಪಿಯನ್ಸ್‌ ಲೀಗ್‌ ಪ್ರಶಸ್ತಿ ಗೆದ್ದು ಬೀಗಿದೆ.

- Advertisement -

ಇಸ್ತಾನ್‌ಬುಲ್‌ನ ಅಟಾಟುರ್ಕ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಯುರೋಪ್‌ ಕ್ಲಬ್‌ ಫುಟ್‌ಬಾಲ್‌ನ ಅತ್ಯುನ್ನತ ಟೂರ್ನಿ ʻ ಯುಇಎಫ್‌ಎ ಚಾಂಪಿಯನ್ಸ್‌ ಲೀಗ್‌ʼನ ಫೈನಲ್‌ ಪಂದ್ಯದಲ್ಲಿ  ಸಿಟಿ, ಇಟಾಲಿಯನ್‌ ಕ್ಲಬ್‌ ಇಂಟರ್‌ ಮಿಲಾನ್‌ ತಂಡವನ್ನು ಏಕೈಕ ಗೋಲಿನಿಂದ ರೋಚಕವಾಗಿ ಮಣಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

68ನೇ ನಿಮಿಷದಲ್ಲಿ ರೋಡ್ರಿ ಗಳಿಸಿದ ಗೋಲು, ಮ್ಯಾಂಚೆಸ್ಟರ್‌ ಸಿಟಿ ತಂಡಕ್ಕೆ ಚೊಚ್ಚಲ ಚಾಂಪಿಯನ್ಸ್‌ ಲೀಗ್‌ ಕಿರೀಟ ಮುಡಿಸಿತು. 2020/21ರ ಋತುವಿನಲ್ಲಿ ಫೈನಲ್‌ನ ಪ್ರವೇಶಿಸಿದ್ದ ಸಿಟಿ, ಪ್ರೀಮಿಯರ್ ಲೀಗ್ ಪ್ರತಿಸ್ಪರ್ಧಿ ಚೆಲ್ಸಿಯಾ ವಿರುದ್ಧ 1-0 ಸೋಲು ಕಂಡಿತ್ತು.

ಐತಿಹಾಸಿಕ `ಟ್ರೆಬಲ್‌’ ಸಾಧನೆ!

ಹಾಲಿ ಋತುವುವಿನಲ್ಲಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಮತ್ತು ಎಫ್‌ಎ ಕಪ್‌ ಪ್ರಶಸ್ತಿ ಗೆದ್ದಿದ್ದ  ಮ್ಯಾಂಚೆಸ್ಟರ್‌ ಸಿಟಿ, ಯುಸಿಎಲ್‌ ಗೆಲ್ಲುವ ಮೂಲಕ ಐತಿಹಾಸಿಕ ಟ್ರೆಬಲ್‌ (ಮೂರು ಪ್ರಮುಖ ಪ್ರಶಸ್ತಿ) ಸಾಧನೆ ಮಾಡಿದೆ. ಇದರೊಂದಿಗೆ ಒಂದೇ ಋತುವಿನಲ್ಲಿ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದ ಮ್ಯಾಂಚೆಸ್ಟರ್ ಯುನೈಟೆಟ್‌ ಕ್ಲಬ್‌ನ ಸಾಧನೆಯನ್ನು ((1999) ಸರಿಗಟ್ಟಿದೆ.

ತಲಾ ಏಳು ಬಾರಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಮತ್ತು ಎಫ್‌ಎ ಕಪ್‌ ಪ್ರಶಸ್ತಿ ಗೆದ್ದಿರುವ ಮ್ಯಾಂಚೆಸ್ಟರ್‌ ಸಿಟಿ ತಂಡಕ್ಕೆ ʻಚಾಂಪಿಯನ್ಸ್‌ ಲೀಗ್‌ʼ ಪ್ರಶಸ್ತಿ ಇದುವರೆಗೂ ಮರೀಚಿಕೆಯಾಗಿಯೇ ಉಳಿದಿತ್ತು.

ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ  ಈಓ ಬಾರಿ ಸಿಟಿ, ಅಜೇಯವಾಗಿ ಫೈನಲ್‌ ಪ್ರವೇಶಿಸಿತ್ತು. ಫೈನಲ್‌ಗೂ ಮುನ್ನ ಆಡಿದ್ದ 12 ಪಂದ್ಯಗಳಲ್ಲಿ, 2 ಪಂದ್ಯಗಳಲ್ಲಿ ಗೋಲು ರಹಿತ ಡ್ರಾ ಸೇರಿದಂತೆ ಒಟ್ಟು 5 ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಕಂಡಿತ್ತು. ಕೇವಲ 5 ಗೋಲುಗಳನ್ನಷ್ಟೇ ಎದುರಾಳಿ ತಂಡಗಳಿಗೆ ಬಿಟ್ಟುಕೊಟ್ಟಿತ್ತು,

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹ್ಯಾಟ್ರಿಕ್ ಗೆಲುವಿನ ಬೆನ್ನಲ್ಲೇ ನಾಯಕತ್ವಕ್ಕೆ ವಿದಾಯ: ದಿಟ್ಟ ನಿರ್ಧಾರದೊಂದಿಗೆ ನಿರ್ಗಮಿಸಿದ ಹರ್ಮನ್‌ಪ್ರೀತ್ ಕೌರ್

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಹರ್ಮನ್‌ಪ್ರೀತ್ ಕೌರ್...

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವ್ಯಕ್ತಿಗತ ಚಿನ್ನದ ಕೊರತೆ; ಒಲಿಂಪಿಕ್ಸ್‌ಗೆ ಎಚ್ಚರಿಕೆಯ ಗಂಟೆ

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ...

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...