ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಗ್ರಹವಾಗಿದ್ದ ಕಂದಾಯ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಾದೂರು ಗ್ರಾಮ ಪಂಚಾಯತಿಯ ಪಿಡಿಒ ಲಕ್ಷ್ಮೀಬಾಯಿ ಅವರನ್ನು ಅಮಾನತು ಮಾಡಲಾಗಿದೆ.
2024-25ನೇ ಆರ್ಥಿಕ ವರ್ಷದಲ್ಲಿ ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯದವರೆಗೆ ಸಂಗ್ರಹಿಸಲಾಗಿದ್ದ ಕಂದಾಯ ಹಣದಲ್ಲಿ ಸರ್ಕಾರಕ್ಕೆ 2.97 ಲಕ್ಷ ರೂ. ಕಡಿಮೆ ಹಣವನ್ನು ಜಮಾ ಮಾಡಲಾಗಿದೆ. ಆ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಪಂಚಾಯತಿ ವ್ಯಾಪ್ತಿಯ ಹಾಲೇನಹಳ್ಳಿ ಗ್ರಾಮದಲ್ಲಿ ಬಡಾವಣೆ ಅಭಿವೃದ್ಧಿಗೆ ಯಾವುದೇ ಪ್ರಾಧಿಕಾರದ ನಕ್ಷೆ ಅನುಮೋದನೆ ಪಡೆಯದೆಯೇ ಜಮೀನಿನ ಭೂ ಪರಿವರ್ತನೆ ಮಾಡಿದ್ದಾರೆ. ಆ ಭೂಮಿಯಲ್ಲಿ ನಿವೇಶಗಳನ್ನಾಗಿ ಮಾಡಿ, ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪವೂ ಕೇಳಿಬಂದಿದೆ.
ಈ ವರದಿ ಓದಿದ್ದೀರಾ?: ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ – ಉನ್ನತ ಶಿಕ್ಷಣದ ಅಧೋಗತಿ
ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಗಳ ನಿರ್ಣಯಗಳನ್ನು ನಡವಳಿಯಲ್ಲಿ ನಮೂದಿಸದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಎಲ್ಲ ಆರೋಪಗಳ ಕಾರಣಗಳಿಂದಾಗಿ ಪಿಡಿಒ ಲಕ್ಷ್ಮೀಬಾಯಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಪ್ರಭು ಆದೇಶಿಸಿದ್ದಾರೆ. ತನಿಖೆಗೆ ಸೂಚಿಸಿದ್ದಾರೆ.
ಪಕ್ಕದ ಬರಗೂರಲ್ಲು ಪಿಡಿಒ ಬಗ್ಗೆ ಮಾತುಗಳಿದಾವೆ ಏನೇನೋ ದುಡ್ಡಿನ ವ್ಯವರ ಮತ್ತೆ ಅವ್ರು ಚನಗ್ ಮಾಡ್ಕೊಂಡಿದ್ದಾರೆ ಅನ್ನೋ ಮಾತುಗಳಿದಾವೆ ಇವ್ರು (ಪಿಡಿಒ) ಅವ್ರು ಸುತ್ತ ಇರೋವ್ರ ಹೆಸರಲ್ಲಿ ಇವ್ರು ಆಸ್ತಿ , ಮತ್ತೆ ಕೆಲ್ಸಾಗಳು ಆಗ್ತಿದಾವೆ ಅಂತ ಮಾತು , ಮೇಲಾಧಿಕಾರಿಗಳು ಗಮನ ಹರಿಸಿ sir.