ಅಕ್ರಮವಾಗಿ ಪಿಸ್ತೂಲ್ಗಳನ್ನು ಹೊಂದಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು ಒಟ್ಟು 10 ಕಂಟ್ರಿ ಪಿಸ್ತೂಲ್ಗಳು ಹಾಗೂ 24 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದು, ಪಿಸ್ತೂಲ್ ಹೊಂದಿದ್ದ 10 ಮಂದಿಯನ್ನೂ ಬಂಧಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಇತ್ತೀಚೆಗೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅರಕೇರಿಯಲ್ಲಿ ನಡೆದಿದ್ದ ಸತೀಶ ಪ್ರೇಮಸಿಂಗ ರಾಠೋಡ ಕೊಲೆ ಪ್ರಕರಣದ ತನಿಖೆಯಲ್ಲಿ ಪಿಸ್ತೂಲ್ ಪೂರೈಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಯಲಾಗಿತ್ತು. ಕೊಲೆ ಪ್ರಕರಣದ ಪ್ರಮುಖ ಆರೋಪಿ ರಮೇಶ್ ಗೇಮು ಲಮಾಣಿಗೆ ಇನ್ನೋರ್ವ ಆರೋಪಿ ಸುರೇಶ್ ರಾಠೋಡ ಎನ್ನುವಾತ ಪಿಸ್ತೂಲ್ ಒದಗಿಸಿದ್ದನು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಿಜಯಪುರ ಜಿಲ್ಲೆಯ ಹಲವಾರು ಜನರಿಗೆ ಅಕ್ರಮ ಪಿಸ್ತೂಲ್ ಪೂರೈಸಿರುವುದಾಗಿ ಒಪ್ಪಿಕೊಂಡಿದ್ದ. ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ, ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಳಕೆಯಲ್ಲಿದ್ದ ಪಿಸ್ತೂಲ್ಗಳನ್ನು ವಶಪಡಿಸಿಕೊಂಡಿದೆ. ದಾಳಿ ವೇಳೆ 10 ಮಂದಿಯನ್ನೂ ಬಂಧಿಸಿದೆ.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಮುರುಡೇಶ್ವರ ಪವರ್ ಕಾರ್ಪೊರೇಷನ್ ಕಂಪೆನಿ ವಿರುದ್ಧದ ಅನಿರ್ದಿಷ್ಟಾವಧಿ ಧರಣಿ ಅಂತ್ಯ
ಪ್ರಕಾಶ್ ಮರ್ಕಿ ರಾಠೋಡ್, ಅಶೋಕ್ ಪರಮು ಪಾಂಡ್ರೆ, ಸುಜಿತ್ ಸುಭಾಸ್ ರಾಠೋಡ್, ಜನಾರ್ದನ ವಸಂತ ಪವಾರ, ಸಾಗರ್ ಅಲಿಯಾಸ್ ಸುರೇಶ್ ರಾಠೋಡ್, ಸುಖದೇವ್ ಅಲಿಯಾಸ್ ಸುಖಿ ನರಸು ರಾಠೋಡ್, ಪ್ರಕಾಶ್ ಭೀಮಸಿಂಗ್ ರಾಠೋಡ್, ಗಣೇಶ್ ಶಿವರಾಮ್ ಶೆಟ್ಟಿ, ಚನ್ನಪ್ಪ ಮಲ್ಲಪ್ಪ ನಾಗನೂರ ಹಾಗೂ ಸಂತೋಷ್ ಕಿಶನ್ ರಾಠೋಡ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
