ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ ಆರೋಪ ಹೊತ್ತಿದ್ದ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದಲ್ಲಿ ನಡೆದಿದೆ. ಶಶಿಧರ್ ಮೃತ ವ್ಯಕ್ತಿ.
ಕುಡಿದ ಅಮಲಿನಲ್ಲಿದ್ದ ಶಶಿಧರ್ ಬುದ್ದಿ ಹೇಳಿದಕ್ಕೆ ಸಿಟ್ಟಿಗೆದ್ದು, ಸಹೋದರನ ಅತ್ತೆಯ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದ. ಬಲವಾದ ಹೊಡೆತದ ಪರಿಣಾಮ ಯಮುನಾ (65) ಸಾವನ್ನಪ್ಪಿದ್ದರು. ಬಳಿಕ ಆರೋಪಿ ಶಶಿಧರ್ ಸ್ಥಳದಿಂದ ಕಾಲ್ಕಿತ್ತಿದ್ದ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ?: ಚಿಕ್ಕಮಗಳೂರು l ಭದ್ರಾ ನದಿಗೆ ಈಜಲು ಹೋಗಿ ಯುವಕ ಸಾವು
ಆರೋಪಿಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು. ಆದರೆ ಇಂದು ಭಾರತೀಬೈಲು ಕಾಫಿತೋಟದಲ್ಲಿ ಆರೋಪಿ ಶಶಿಧರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ನಿಗೂಢ ಸಾವು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ.
