ಯದಾ ಚರ್ಮವದಾಕಾಶಂ ವೇಷ್ಟಯಿಷ್ಯಂತಿ ಮಾನವಾಃ |ತದಾ ಶಿವಮವಿಜ್ಞಾಯ ದುಃಖಸ್ಯಾಂತೋ ಭವಿಷ್ಯತಿ ||(ಆಕಾಶವನ್ನೇ ಚರ್ಮದಂತೆ ಹೊದೆದುಕೊಂಡು ಮಲಗುವ ಮನುಷ್ಯರಿಗೆ ಶಿವನನ್ನು ಅರಿಯದೆಯೂ ಸಹ ದುಃಖದಿಂದ ಬಿಡುಗಡೆ ಆಗುತ್ತದೆ) ಅನುಭವ ಮಂಟಪದಲ್ಲಿ ಅಕ್ಕ-ಅಲ್ಲಮರು ಮೊದಲ ಸಲ ಭೇಟಿಯಾದಾಗ ಅಲ್ಲಮಪ್ರಭು ಅಕ್ಕನನ್ನು “ನೀನು ನಿಜವಾಗಿಯೂ ವಿರಕ್ತಳಾಗಿದ್ದರೆ, ಕಾಮ ವಿವರ್ಜಿತಳೇ ಆಗಿದ್ದರೆ ನಿನ್ನ ಗುಪ್ತಾಂಗಗಳನ್ನು ಕೂದಲಿನಿಂದ ಏಕೆ ಮುಚ್ಚಿಕೊಂಡಿರುವೆ? ನಿನ್ನ ಲಜ್ಜಾ ವರ್ತನೆಯನ್ನು ನೋಡಿದರೆ ನೀನಿನ್ನೂ ಶರೀರಭಾವದಿಂದ ಹೊರಬಂದಿಲ್ಲ ಎನಿಸುತ್ತದೆ” ಎಂದು ಆಕ್ಷೇಪಿಸುತ್ತಾನೆ. ಅದಕ್ಕೆ ಅಕ್ಕ ನೀಡಿದ ಉತ್ತರ ನಿಜವಾಗಿಯೂ ಆಘಾತಕಾರಿಯಾದುದು, “ನಾನು…

ಡಾ. ಟಿ.ಎನ್. ವಾಸುದೇವಮೂರ್ತಿ
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ.ಟಿ.ಎನ್.ವಾಸುದೇವಮೂರ್ತಿ ಅವರು, ಕಿರಂ ನಾಗರಾಜ ಅವರ ಮಾರ್ಗದರ್ಶನದಲ್ಲಿ ಅಲ್ಲಮನ ಕುರಿತು ಸಂಶೋಧನೆ ಮಾಡಿದವರು. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ಪಡೆದಿರುವ ಇವರು ಓಶೋ ರಜನೀಶರ ಹಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಬುದ್ಧ ಮತ್ತು ಪರಂಪರೆ, ಹುಚ್ಚುತನವೇ ಅನುಗ್ರಹ ನೀಷೆ, ಓಶೋ ಕಾವ್ಯಧರ್ಮ ಮತ್ತು ಧರ್ಮ, ಜ್ಹೆನ್ ಹಾಯ್ಕುಗಳು, ಮಹಾತ್ಮ, ರಮಣ ಹೃದಯ, ದೇವರು, ಇದನ್ನು ಬಯಸಿರಲಿಲ್ಲ, ಧ್ಯಾನಸಿದ್ಧ- ಇತ್ಯಾದಿ ಕೃತಿಗಳನ್ನು ಪ್ರಕಟಿಸಿದ್ದಾರೆ.
Comments are closed.