ಶಿವಮೊಗ್ಗ ನಗರದ ಹೋಟೆಲ್‌ವೊಂದರಲ್ಲಿ ಪರಿಚಯಸ್ಥ ಹುಡುಗಿಯೊಂದಿಗೆ ಊಟ ಮಾಡುವ ವೇಳೆ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಪಡ್ಡೆ ಹುಡುಗರ ಗುಂಪೊಂದು ಯುವಕ-ಯುವತಿಯ ವಿಡಿಯೊ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದವರ ಬಂಧನವಾಗಿದೆ.
ಹೋಟೆಲ್‌ನಲ್ಲಿ ಕುಳಿತಿದ್ದ ಯುವಕ-ಯುವತಿಯ ವಿಡಿಯೋ ಮಾಡಿ ಅವರನ್ನು ಅಪಹರಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದು, ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸರು ಈ ಪ್ರಕರಣವನ್ನು ಬೇಧಿಸಿ ಮೂವರನ್ನೂ ಬಂಧಿಸಿದ್ದಾರೆ.
ಭದ್ರಾವತಿಯ ದೊಡ್ಡಗಟ್ಟದ ಯುವಕ ಶಹಿದ್ ಫಜಲ್ ಎಂಬಾತ ಪರಿಚಯಸ್ಥ ಯುವತಿಯೊಂದಿಗೆ ಶಿವಮೊಗ್ಗದ ʼಅಮ್ಮ ಹೋಟೆಲ್ʼಗೆ ಬಂದಿದ್ದನು. ಈ ಯುವಕ ಬಿಯರ್ ತೆಗೆದುಕೊಂಡು ಊಟಕ್ಕೆ ಕುಳಿತಿದ್ದನು. ಈ ವೇಳೆ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಪುಂಡ ಪೋಕರಿ ಇಲಿಯಾಜ್‌ನ ಗ್ಯಾಂಗ್ ವಿಡಿಯೊ ಮಾಡಿಕೊಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಮೈಕ್ರೋ ಫೈನಾನ್ಸ್ ನಿಯಮಗಳ ಬಗ್ಗೆ ಸಾರ್ವಜನಿಕ ಸಭೆ : ನಬಾರ್ಡ್, ಲೀಡ್ ಬ್ಯಾಂಕ್ ಅಧಿಕಾರಿಗಳು ಭಾಗಿ
ಪ್ರಕರಣವನ್ನು ಬೇಧಿಸಿದ ತುಂಗಾನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಪೇಟೆಯಿಲಿಯಾಜ್ ಯಾನೆ ಇಲ್ಲು, ಚೀಲೂರಿನ ಮೊಹಮದ್ ವಾಸಿಮ್, ಅಣ್ಣನಗರದ ಚಂದ್ರಶೇಖರ್ ಎಂಬುವವರನ್ನು ಬಂಧಿಸಿದ್ದಾರೆ.