ಇಪ್ಪತ್ತೈದು ನಿಮಿಷಗಳ ದೀರ್ಘಾವಧಿ ಸಮಯದ ವಾಣಿಜ್ಯ ಜಾಹೀರಾತು ಪ್ರದರ್ಶಿಸುವ ಮೂಲಕ ಬೆಂಗಳೂರು ವ್ಯಕ್ತಿಯ ಸಮಯ ಪೋಲು ಮಾಡಿ ಮಾನಸಿಕ ಸಂಕಟ ಉಂಟು ಮಾಡಿದ ಪಿವಿಆರ್, ಐನಾಕ್ಸ್‌ಗೆ ಬೆಂಗಲೂರಿನ ಗ್ರಾಹಕರ ನ್ಯಾಯಾಲಯ 65 ಸಾವಿರ ರೂ. ದಂಡ ವಿಧಿಸಿ ಪರಿಹಾರದ ಹಣವನ್ನು ವ್ಯಕ್ತಿಗೆ ನೀಡಲು ಆದೇಶಿಸಿದೆ.
ಅಬಿಷೇಕ್ ಎಂ ಆರ್ ಎಂಬುವವರು 2023ರಲ್ಲಿ ಬುಕ್ ಮೈ ಶೋ ಮೂಲಕ ‘ ಸಾಮ್ ಬಹದ್ದೂರ್’ ಸಿನಿಮಾ ನೋಡಲು ಬುಕ್ ಮೈಶೋ ಮೂಲಕ ಸಂಜೆ 4 ಪ್ರದರ್ಶನದ ಮೂರು ಟಿಕೆಟ್ ಖರೀದಿಸಿದ್ದರು. ಸಿನಿಮಾ 6.30ಕ್ಕೆ ಮುಗಿಸಿ ಅವರು ಬೇರೆ ಕೆಲಸಗಳಿಗೆ ಕೆಲಸಕ್ಕೆ ತೆರಳಬೇಕಿತ್ತು. ಆದರೆ ಸಿನಿಮಾ ಜಾಹೀರಾತು, ಟ್ರೈಲರ್‌ಗಳ ಮೂಲಕ ಸಂಜೆ 4.30 ಕ್ಕೆ ಆರಂಭವಾಗಿ ಸುಮಾರು 30 ನಿಮಿಷಗಳ ಕಾಲ ಸಮಯ ವ್ಯರ್ಥವಾಯಿತು.
ಸಮಯ ಅಮೂಲ್ಯವಾದುದು, ಕಂಪನಿಯವರು ತಮ್ಮ ಲಾಭವನ್ನು ಪಡೆಯುವುದಕ್ಕಾಗಿ ಅನಗತ್ಯ ಜಾಹೀರಾತುಗಳನ್ನು ಪ್ರದರ್ಶಿಸುವುದು ಸ್ಪಷ್ಟವಾಗಿದೆ. ಅರ್ಧ ಗಂಟೆ ಸಮಯ ವ್ಯರ್ಥವಾದ ಕಾರಣ ದೂರುದಾರರು ತಮ್ಮ ಕಾರ್ಯಕ್ರಮಗಳು ಹಾಗೂ ಪೂರ್ವನಿಗದಿ ಯೋಜನೆಗಳಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಇದರಿಂದ ತಮಗೆ ನಷ್ಟವಾಗಿದ್ದು, ಪರಿಹಾರ ದೊರಕಿಸಿಕೊಡಬೇಕೆಂದು ಅಭಿಷೇಕ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಂತು ಬೇಸಿಗೆ, ತತ್ವಾರ ತಂತು ನೀರಿಗೆ, ಅನುಕೂಲ ಅವಕಾಶವಾದಿಗಳಿಗೆ!
“ಸಮಯವು ಹಣಕ್ಕಿಂತ ಅಮೂಲ್ಯವಾದದು, ಆದ ಕಾರಣ ದೂರುದಾರರಿಗೆ ಪಿವಿಆರ್ ಹಾಗೂ ಐನಾಕ್ಸ್ ನಷ್ಟವನ್ನು ತುಂಬಿಕೊಡಬೇಕು. ಅನಗತ್ಯ ವಾಣಿಜ್ಯ ಜಾಹೀರಾತು ಪ್ರಕಟಿಸಿ ಸಮಯ ಹಾಳು ಮಾಡಿದ್ದಕ್ಕಾಗಿ ಪಿವಿಆರ್ ಹಾಗೂ ಐನಾಕ್ಸ್ 50 ಸಾವಿರ ದಂಡ ವಿಧಿಸಲಾಗಿದೆ. ಮಾನಸಿಕ ಸಂಕಟಕ್ಕಾಗಿ 5 ಸಾವಿರ ಹಾಗೂ ಉಳಿದ 10 ಸಾವಿರವನ್ನು ದೂರುದಾರರ ವೆಚ್ಚ ಹಾಗೂ ಇತರ ಪರಿಹಾರಕ್ಕೆ ನೀಡಬೇಕು. ಹಾಗೆಯೇ ಪಿವಿಆರ್ ಐನಾಕ್ಸ್‌ಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ” ಎಂದು ಕೋರ್ಟ್ ತಿಳಿಸಿತು.
ದಂಡದ ಹಣವನ್ನು ಗ್ರಾಹಕ ಕ್ಷೇಮಾಭಿವೃದ್ಧಿ ನಿಧಿಗೆ ನೀಡಬೇಕೆಂದು ಕೋರ್ಟ್ ನಿರ್ದೇಶಿಸಿತು. ಒಂದು ತಿಂಗಳ ಒಳಗಾಗಿ ಎಲ್ಲ ದಂಡದ ಹಣವನ್ನು ಪಾವತಿಸಬೇಕೆಂದು ಕೋರ್ಟ್ ಆದೇಶಿಸಿತು. ಟಿಕೆಟ್ ಬುಕ್ಕಿಂಗ್ ವೇದಿಕೆ ಬುಕ್ ಬೈ ಶೋ ಅವರ ಪಾತ್ರ ಇರದಿದ್ದ ಕಾರಣ ಅವರನ್ನು ಹೊಣೆಗಾರರನ್ನಾಗಿ ಮಾಡದಿರಲು ಕೋರ್ಟ್ ನಿರ್ಧರಿಸಿತು.
