ದೇಶದ ಶಕ್ತಿ ಯುವಜನತೆ ಮೇಲೆ ಅವಲಂಬಿತವಾಗಿದೆ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ “ಯುವ ಚಿಂತನಾ ಸಮಾವೇಶ–2025” ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.
ಧಾರವಾಡದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಅಂಜುಮನ್ ಪದವಿ ಮಹಾವಿದ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಯುವ ಖುಷಿ ಸಮುದಾಯ, ಮಹಿಳಾ ಸಬಲೀಕರಣ ಹಾಗೂ ಸ್ವ-ಉದ್ಯೋಗ ಕುರಿತು ಚಿಂತನೆ ನಡೆಯಿತು. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಇಂತಹ ಸಮಾವೇಶಗಳನ್ನು ಇನ್ನಷ್ಟು ಬೃಹತ್ ರೂಪದಲ್ಲಿ ನಡೆಸಬೇಕು. ನಮ್ಮ ದೇಶದ ಶಕ್ತಿ ಯುವಜನತೆ ಮೇಲೆ ಅವಲಂಬಿತವಾಗಿದೆ ಎಂದರು.
ಯುವ ಜನತೆಯಲ್ಲಿ ಉತ್ಸಾಹ ಕುಂಟಿತ ಆಗುತ್ತಿರುವದು ವಿಷಾದನೀಯ. ದೇಶದ ಶಕ್ತಿಯಾಗಿ ಯುವ ಸಮುದಾಯ ಮುಂದೆ ಬರಬೇಕು ಎಂದು ವಿದ್ಯವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಯುವ ಸಮುದಾಯವನ್ನು ಉದ್ದೇಶೀಸಿ ಮಾತನಾಡಿದರು. ಪಂ. ಪುಟ್ಟರಾಜ ಗವಾಯಿ ಕಲಾ ಪ್ರತಿಷ್ಠಾನದ ಉಪಾಧ್ಯಕ್ಷ ಸುರೇಶ ಬೆಟಗೇರಿ, ಪ್ರಾಸ್ತಾವಿಕ ಭಾಷಣದಲ್ಲಿ ಪ್ರತಿಷ್ಠಾನದ ಉದ್ದೇಶ ಮತ್ತು ಗುರಿಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸೀರ ಅಹ್ಮದ್ ಜಹಾಗೀರದಾರ ಮಾತನಾಡಿ, ನಮ್ಮ ದೇಶವು ಸರ್ವಜನಾಂಗದ ಶಾಂತಿಯ ತೋಟ. ಯುವಕರು ಮೊಬೈಲ್’ಗಳಿಂದ ದೂರವಿದ್ದು ಜನಸಂಪರ್ಕ ಹೆಚ್ಚಿಸಬೇಕು ಎಂದರು. ಪುಟ್ಟರಾಜ ಗವಾಯಿ ಕಲಾ ಪ್ರತಿಷ್ಠಾನ ಅಧ್ಯಕ್ಷ ಎಂ ಎಸ್ ಫರಾಸ ಮಾತನಾಡಿ, ಯುವ ಜನತೆ ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮೀಳಾ ಜಕ್ಕಪ್ಪನ್ನವರ ಯುವ ಸಮುದಾಯ ಕುರಿತ ಹಾಡು ಹಾಡಿದರು. ಕಬೀರ್ ನದಾಫ್, ಬಸವರಾಜ ಮೇಗೇರಿ, ರೀಯಾಜ ನನ್ನೇಸಾಬನ್ನವರ, ಎಂ.ಎಸ್. ಫರಾಸ, ಡಾ ಐ. ಎ. ಮುಲ್ಲಾ, ಖೈರುದ್ಧಿನ್ ಶೇಖ್ ಉಪಸ್ಥಿತರಿದ್ದರು.
ಡಾ,ನಾಗರಾಜ್ ಗುದಗನವರ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಎನ್. ಬಿ.ನಾಲತವಾಡ ವಂದನಾರ್ಪಣೆ ಮಾಡಿದರು. ಡಾ. ಸೌಭಾಗ್ಯ ಜಾದವ್ ನಿರೋಪಿಸಿದರು.