ಪುಟ್ಟ ಮಕ್ಕಳನ್ನು ಬೈಕ್‌ನಲ್ಲಿ ಕರದೊಯ್ಯುವಾಗ ಹೆಲ್ಮೆಟ್ ಬಳಸಿ ಎನ್ನುವ ಅಭಿಯಾನವನ್ನು ಆರಂಭಿಸಿರುವ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಇನ್ನೊಂದೆಡೆ ಇನ್ಶೂರೆನ್ಸ್ ಇಲ್ಲದೆ ಬಸ್ ಓಡಿಸುತ್ತಿರುವುದನ್ನು ಪತ್ತೆ ಮಾಡಿ ₹4500 ಫೈನ್ ಹಾಕಿದ್ದಾರೆ.
ಫೆ.19ರಂದು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಮತ್ತು ಸಿಬ್ಬಂದಿ ಪ್ರಕಾಶ್ ಕೆ ಆರ್ ಎಸ್ ಐ, ಪ್ರವೀಣ್ ಪಾಟೀಲ್ ಹೆಚ್ ಸಿ, ಪ್ರಶಾಂತ್, ಚಂದ್ರ ನಾಯಕ್, ಶಿವಕುಮಾರ್, ಪಿ ಸಿ ವಾಹನ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ಬಸ್‌ವೊಂದು ಇನ್ಶೂರೆನ್ಸ್ ಇಲ್ಲದೆ ಸಂಚರಿಸುತ್ತಿದ್ದನ್ನು ಸಿಬ್ಬಂದಿ ಕಂಡುಹಿಡಿದಿದ್ದಾರೆ. ಆ ಬಳಿಕ ಬಸ್ ತಡೆದು ಅದರಲ್ಲಿದ್ದ ಪ್ರಯಾಣಿಕರಿಗೆ ಇನ್ಶೂರೆನ್ಸ್ ಇಲ್ಲದ ವಾಹನ ಚಲಾಯಿಸುವುದು ಅಪರಾಧ ಎಂಬುದನ್ನು ಮತ್ತು ವಿಮೆ ಮಾಡಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿವಳಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಪುಟಾಣಿ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ; ಟ್ರಾಫಿಕ್ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ
ಬಸ್ ಮಾಲಿಕ ₹4500 ದಂಡ ಪಾವತಿಸಿದ ಬಳಿಕ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.
